2024-25 ರ ಅರೇಬಿಕ್ ಮತ್ತು ದೀನಿಯಾತ್ ಸ್ಪರ್ಧಾ ಕೂಟವು ದಿನಾಂಕ 4.1.2025 ರಂದು ಶಾಲಾ ಆವರಣದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಮಹಮ್ಮದ್ ಖಾಲಿದ್ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಅಲ್ ಹಾಜ್ ಮೌಲಾನ ಮುಸ್ತಫಾ ಸಅದಿ ಯವರು ನೆರವೇರಿಸಿದರು.ಹಾಗೂ ಗೌರವ ಅತಿಥಿಗಳಾಗಿ ಮೌಲಾನ ಉಬೇದುರ್ರಹ್ಮಾನ್ ನದ್ವಿ, ಮೌಲಾನ ದಾನಿಶ್ ಇಶಾತಿಯವರು ಆಗಮಿಸಿದ್ದರು.ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.ವೇದಿಕೆಯಲ್ಲಿ ಶಾಲಾ ಉಪಾಧ್ಯಕ್ಷರಾದ ಜನಾಬ್ ಉಮ್ಮರ್ ಇಸ್ಮಾಯಿಲ್, ಜನಾಬ್ ಹಸನಬ್ಬ ಶೇಖ್,ಶಾಲಾ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್, ಜನಾಬ್ ಲತೀಫ್ ರವರು ಉಪಸ್ಥಿತರಿದ್ದರು.ಮೌಲಾನ ಪರ್ವೇಝ್ ಆಲಂ ನದ್ವಿಯವರು ಕಾರ್ಯಕ್ರಮ ನಿರೂಪಿಸಿದರು.
ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಿರ್ವ.ಅರೇಬಿಕ್ ದೀನೀಯಾತ್ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ

