Site icon ಉಡುಪಿ ನ್ಯೂಸ್ ಪ್ಲಸ್

ಶಿರ್ವ : ಹಿಂದೂ ಜೂ. ಕಾಲೇಜು: ಹಳೆವಿದ್ಯಾರ್ಥಿ ಸಂಘದ ದಶಮಾನೋತ್ಸವ ಉಪಾಹಾರ ಗೃಹ ಉದ್ಘಾಟನೆ

ಶಿರ್ವವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ 2014ರಲ್ಲಿ ಸ್ಥಾಪನೆಗೊಂಡ
ಹಿಂದೂ ಜೂನಿಯರ್ ಕಾಲೇಜು ಹಳೆವಿದ್ಯಾರ್ಥಿ ಸಂಘದ ದಶಮಾನೋತ್ಸವ ಕೊಡುಗೆಯಾಗಿ ಸುಮಾರು 18 ಲ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಉಪಾಹಾರ ಗೃಹದ ಸಮರ್ಪಣೆ ಕಾರ್ಯಕ್ರಮವು ಡಿ. 29ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.
ದಾನಿಗಳಾದ ಹಿರಿಯ ಹಳೆ ವಿದ್ಯಾರ್ಥಿ ಶಿರ್ವ ಅಟ್ಟಿಂಜೆ ಶಂಭು ಶೆಟ್ಟಿ ಹೇಮಲತಾ ಶೆಟ್ಟಿ ದಂಪತಿ ಮತ್ತು ಕೋಡು ದಿವಾಕರ ಶೆಟ್ಟಿ ಸವಿತಾ ಶೆಟ್ಟಿ ದಂಪತಿ ಅನ್ನಪೂರ್ಣ ಉಪಾಹಾರ ಗೃಹವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಸಂಸ್ಥಾಪಕ ದಿ|ಕೆ.ಮುದ್ದುಶೆಟ್ಟಿ ಅವರ, ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮತ್ತು ವಿಧಾನಪರಿಷತ್‌ ಸದಸ್ಯ ಐವನ್ ಡಿ’ಸೋಜಾ ಕ್ರೀಡಾಂಗಣದ ಪೆವಿಲಿಯನ್‌ನ ಶಿಲಾನ್ಯಾಸ ನೆರವೇರಿಸಿದರು. ಯು.ಎ.ಇ. ಬಂಟರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಅಂಕಲೇಶ್ವರ ಮಾತಾಶ್ರೀ ಹಾಸ್ಪಿಟಾಲಿಟಿಯ ಸಿಎಂಡಿ ಅಜಿತ್ ಎಸ್.ಶೆಟ್ಟಿ, ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿ. ಸುಬ್ಬಯ್ಯ ಹೆಗ್ಡೆ, ಆಡಳಿತಾಧಿಕಾರಿ ಪ್ರೊ ವೈ. ಭಾಸ್ಕರ ಶೆಟ್ಟಿ, ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಶಿರ್ವ ನಡಿಬೆಟ್ಟು ಸಂಗೀತಾ ಎಸ್. ಹೆಗ್ಡೆ ನಿವೃತ್ತ ಪ್ರಾಂಶುಪಾಲ ರಾಜಗೋಪಾಲ್ ಕೆ., ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್, ದಶಮಾನೋತ್ಸವ ಸಂಘಟನಾ ಸಮಿತಿ ಅಧ್ಯಕ್ಷ ಖಾಂದೇಶ್ ಭಾಸ್ಕರ ಶೆಟ್ಟಿ ಮುಂಬಯಿ ಘಟಕದ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ದಶಮಾನೋತ್ಸವ ಸಂಘಟನಾ ಸಮಿತಿ ಸಂಚಾಲಕರಾದ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ ಮತ್ತು ಸಚ್ಚಿದಾನಂದ ಹೆಗ್ಡೆ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶಿಕ್ಷಕಿ ವಸಂತಿ ಮತ್ತು ಹಳೆವಿದ್ಯಾರ್ಥಿಗಳು ಭಾಸ್ಕರ್ ಎ.,ಮುಖ್ಯ ಉಪಸ್ಥಿತರಿದ್ದರು. ಬಳಿಕ ನಡೆದ ದಶಮಾನೋತ್ಸವ ದಾನಿಗಳಿಗೆ
ಕಾರ್ಯಕ್ರಮದಲ್ಲಿ ಸಮ್ಮಾನ, ಹಳೆವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಡೆಯಿತು.

Exit mobile version