Site icon ಉಡುಪಿ ನ್ಯೂಸ್ ಪ್ಲಸ್

ಎರ್ಮಾಳು ತೆಂಕ ಕಿನಾರಾ ಆಂಗ್ಲ ಮಾಧ್ಯಮ ” ಶಾಲಾ ವಾರ್ಷಿಕ ಕ್ರೀಡಾಕೂಟ – 2024-25

ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ (ರಿ) ಎರ್ಮಾಳು ತೆಂಕ ಇದರ ಆಡಳಿತಕ್ಕೆ ಒಳಪಟ್ಟ ” ಕಿನಾರಾ ಆಂಗ್ಲ ಮಾಧ್ಯಮ ” ಶಾಲೆಯ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ನೆರವೇರಿತು.. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಗಿರೀಶ್ ಎಸ್ ಕುಂದರ್ ಮ್ಯಾನೇಜಿಂಗ್ ಡೈರೆಕ್ಟರ್ ECS Group of companies India, Mumbai ಇವರು ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಯಾಗಿ ಶ್ರೀ ಅಮಿತ್ ಪುತ್ರನ್ ಮುಂಬೈ, ಚೇರ್ಮನ್ ಬಿಲ್ಡಿಂಗ್ ಮಾನಿಟರಿಂಗ್ ಕಮಿಟಿ ಕಿನಾರ ಆಂಗ್ಲ ಮಾಧ್ಯಮ ಶಾಲೆ, ಮತ್ತೋರ್ವ ಅತಿಥಿ ಶ್ರೀ ದೀರೇಶ್ ಕೋಟ್ಯಾನ್ ಬ್ರಾಂಚ್ ಮ್ಯಾನೇಜರ್ ಗುಡ್ರಿಚ್ ಮೇರಿ ಟೈಮ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಉಪಸ್ಥಿತರಿದ್ದರು. ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ(ರಿ) ಮುಂಬೈನ ಅಧ್ಯಕ್ಷರಾದ ಶ್ರೀ ಸುರೇಶ್ ಕುಂದರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ(ರಿ) ಎರ್ಮಾಳು ತೆಂಕದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ವಿಶೇಷವಾದ ಬ್ಯಾಂಡ್ ಸೆಟ್ ಪ್ರದರ್ಶನ ಕಾರ್ಯಕ್ರಮದ ಮೇರುಗನ್ನು ಹೆಚ್ಚಿಸಿತು. ಕಾರ್ಯಕ್ರಮದಲ್ಲಿ ಎರ್ಮಾಳು ತೆಂಕ ಮೊಗವೀರ ಸಭಾದ ಅಧ್ಯಕ್ಷರಾದ ಶ್ರೀ ಲಿಂಗಪ್ಪಪುತ್ರನ್ ಮೊಗವೀರ ಸಭಾ ಮುಂಬೈನ ಉಪಾಧ್ಯಕ್ಷರಾದ ಶ್ರೀ ರವಿ ಪುತ್ರನ್, ಪ್ರಭಾಕರ್ ಪುತ್ರನ್, ಸುನಿಲ್ ಕುಮಾರ್ ಪೋಷಕರ ಪ್ರತಿನಿಧಿ ಮಹಮ್ಮದ್ ಸಲೀಂ ಶಾಲಾ ಮುಖ್ಯೋಪಾಧ್ಯಾಯನಿ ಪ್ರೀತಿ ಸುವರ್ಣ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರೀತಿ ಸುವರ್ಣ ಸ್ವಾಗತಿಸಿ ಶ್ರೀಮತಿ ಸರಿತಾ ಸಂದೇಶ ವಂದಿಸಿದರು. ಶ್ರೀಮತಿ ಪ್ರತಿಮಾ ಹಾಗೂ ಕುಮಾರಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Exit mobile version