Site icon ಉಡುಪಿ ನ್ಯೂಸ್ ಪ್ಲಸ್

ವಿಕಲಚೇತನರಿಗೆ ಮೋಟೋರೈಸ್ಡ್ ಟ್ರೈಸಿಕಲ್ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನ ಫಲಾನುಭವಿಗಳಾದ ನಫ್ರಿಶಾತ್ತುಲಾ ಮಿಶ್ರಿಯಾ ಅವರಿಗೆ ಮಂಜೂರಾದ ಮೋಟೋರೈಸ್ಡ್ ಟ್ರೈಸಿಕಲನ್ನು ಇಂದು ದಿನಾಂಕ 06-12-2024 ರಂದು ಕಾಪು ಶಾಸಕ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು. ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 1ಫಲಾನುಭವಿಗೆ ಮೋಟೋರೈಸ್ಡ್ ಟ್ರೈಸಿಕಲ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಕಲಚೇತನರ ಇಲಾಖೆಯ ಶಿವಾಜಿ ಉಪಸ್ಥಿತರಿದ್ದರು.

Exit mobile version