Site icon ಉಡುಪಿ ನ್ಯೂಸ್ ಪ್ಲಸ್

ಮಾಜಿ ಸಚಿವರು, ಹಿರಿಯ ಮುಖಂಡರಾದ ಕೆ. ಎಸ್. ಈಶ್ವರಪ್ಪ ದಂಪತಿ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ

ಉಡುಪಿಗೆ ಪ್ರವಾಸ ನಿಮಿತ್ತ ಆಗಮಿಸಿದ ಮಾಜಿ ಸಚಿವರು, ಹಿರಿಯ ಮುಖಂಡರಾದ ಕೆ. ಎಸ್. ಈಶ್ವರಪ್ಪ ದಂಪತಿ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದು, ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ನವದುರ್ಗಾ ಲೇಖನ ಯಜ್ಞದ ಮಾಹಿತಿ ಪಡೆದು ಕುಟುಂಬ ಸಮೇತರಾಗಿ ಲೇಖನ ಬರೆದು ಶಿಲಾಸೇವೆಯೊಂದಿಗೆ ಅಮ್ಮನಿಗೆ ಸಮರ್ಪಿಸಲು ಸಂಕಲ್ಪಿಸಿದರು ಈ ಸಂದರ್ಭ ಉಡುಪಿಯ ನಿಕಟಪೂರ್ವ ಶಾಸಕರು, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಉಪಸ್ಥಿತರಿದ್ದರು.

Exit mobile version