ಉಡುಪಿ ನ್ಯೂಸ್ ಪ್ಲಸ್

ಕೋಟೇಶ್ವರ: ನೇತ್ರ ತಜ್ಞರ ಸಮ್ಮೇಳನ – ಶ್ರೀಪಾದ ಎಸ್ಸೋ ನಾಯಕ್ ಉದ್ಘಾಟನೆ

ಕೋಟೇಶ್ವರ, ನ. 22: ನೇತ್ರ ತಜ್ಞರ ಸಮ್ಮೇಳನ ‘ಕೋಸ್ಕೋನ್’ ನ. 22ರಂದು ಕೋಟೇಶ್ವರದ ಯುವ ಮೇರಿಡಿಯನ್ ಸಭಾ ಭವನದಲ್ಲಿ ನಡೆಯಿತು. ಕೇಂದ್ರ ಇಂಧನ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ। ಕೃಷ್ಣ ಪ್ರಸಾದ್ ಕೂಡ್ಲು ಅವರು ಬಹಳಷ್ಟು ಶ್ರಮಪಟ್ಟು ಕಾರ್ಯಕ್ರಮ ರೂಪಿಸಿದ್ದಾರೆ. ನೇತ್ರತಜ್ಞರ ಸೇವೆ ಗ್ರಾಮಗಳಲ್ಲಿ ಪಸರಲಿ ಎಂದರು. ಡಾ| ಎಚ್. ಎಸ್. ಬಲ್ಲಾಳ್ ಶುಭ ಕೋರಿದರು. ಭಾರತೀಯ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ, ಡಾ। ಎನ್. ಟಿ. ಶ್ರೀನಿವಾಸ್ ಡಾ। ಚಂದ್ರಶೇಖರ ಶೆಟ್ಟಿ ಕೋಸ್ ಅಧ್ಯಕ್ಷ ಡಾ| ಕೃಷ್ಣಪ್ರಸಾದ್ ಕೂಡ್ಲು, ಡಾ| ಹೇಮಂತ್ ಮೂರ್ತಿ, ಡಾ| ಶಿವರಾಮ್ ಕೆ. ವಿ., ಡಾ| ಚೈತ್ರಾ ಜಯದೇವ, ಡಾ| ಸಚಿನ್ ಮಹೋಲಿ ಡಾ| ವಿಕ್ರಮ್ ಜೈನ್, ಡಾ| ಎಲಮ್ ಕುಮಾರ್, ಡಾ| ಕವಿತಾ ವಿ., ಡಾ| ಶ್ರೀನಾಥ್ ಕಾಮತ್, ಡಾ| ಸಂದೀಪ್ ಶೆಣೈ, ಡಾ। ಯೋಗೀಶ್ ಕಾಮತ್, ಯುವ ಮೇರಿಡಿಯನ್ ಆಡಳಿತ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ ಡಾ| ಸಮಂತ ಶೆಟ್ಟಿ, ಡಾ| ಶರತ್ ಹೆಗ್ಡೆ ಡಾ| ಚಿನ್ನಪ್ಪ ಡಾ| ಶೈಲಜಾ ಉಪಸ್ಥಿತರಿದ್ದರು. ಸಾಧಕ ಹಿರಿಯ ನೇತ್ರ ತಜ್ಞರನ್ನು ಗೌರವಿಸಿ ಸಮ್ಮಾನಿಸಲಾಯಿತು

Exit mobile version