ಉಡುಪಿ: ಹಳ್ಳಿ ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಕರೆಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಇರುವ ಏಕೈಕ ಸಂಘಟನೆ ಅಂಬೇಡ್ಕರ್ ವಾದ , ನಾವೆಲ್ಲರೂ ಇಲ್ಲಿ ಅಂಬೇಡ್ಕರ್ ಋಣವನ್ನು ತೀರಿಸಲು ಬಂದಿದ್ದೇವೆ.ಹೊಟ್ಟೆ ಪಾಡಿಗೆ ನಮಗೆ ಓಳ್ಳೆಯ ಉಧ್ಯೋಗ ಇದೆ , ಆದರೆ ಧ್ವನಿ ಇಲ್ಲದ ನಮ್ಮ ಶೋಷಿತ ಸಮೂದಾಯದವರಿಗೆ ಧ್ವನಿಯಾಗಲು ಹಳ್ಳಿ ಹಳ್ಳಿಗಳಲ್ಲೂ ದ.ಸಂ.ಸ.ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದರು. ಬ್ರಹ್ಮಾವರ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶಾಂತರಾಜ್ ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಮುಖ್ಯ ಅತಥಿಗಳಾಗಿ ಆರೂರು ಬಬ್ಬುಸ್ವಾಮಿ ದೇವಸ್ಥಾನದ ಮೋಕ್ತೇಸರರಾದ ಅರುಣ್ ಕುಮಾರ್ ಶೆಟ್ಟಿ , ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ರಾವ್ , ಗ್ರಾಮ ಪಂಚಾಯತ್ ಸಧಸ್ಯರಾದ ಪಾರ್ವತಿ , ಮಾಜೀ ಪಂಚಾಯತ್ ಅಧ್ಯಕ್ಷರಾದ ರಾಜೀವ ಕುಲಾಲ್ , ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ , ಸುರೇಶ ಹಕ್ಲಾಡಿ , ಅಣ್ಣಪ್ಪ ನಕ್ರೆ , ರಾಜೇಂದ್ರ ನಾಥ್ , ಮಂಜುನಾಥ ಹಳಗೇರಿ , ಭಾಸ್ಕರ ಮಾಸ್ಟರ್ , ಕುಮಾರ್ ಕೋಟ , ಶ್ರೀಧರ್ ಕುಂಜಿಬೆಟ್ಟು , ತಾಲೂಕು ಪದಾಧಿಕಾರಿಗಳಾದ ಶಂಕರ್ ದಾಸ್ ಚೆಂಡ್ಕಳ , ವಡ್ಡರ್ಸೆ ಶ್ರೀನಿವಾಸ, ವಿಠಲ ಉಚ್ಚಿಲಾ,ಪ್ರಶಾಂತ ಬಿರ್ತಿ, ವಿಜಯ ಗಿಳಿಯಾರು , ಶಿವಾನಂದ ಬಿರ್ತಿ , ಸುಧಾಕರ ಮಾಸ್ಟರ್ ಗುಜ್ಜರ್ ಬೆಟ್ಟು , ಹರೀಶ್ಚಂದ್ರ ಬಿರ್ತಿ , ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆ ಆದ ಆರೂರು ಗ್ರಾಮ ಶಾಖೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು.ಆರೂರು ಶಾಖೆಯ ಪ್ರಧಾನ ಸಂಚಾಲಕರಾಗಿ ನರಸಿಂಹ ಅವರನ್ನು ಆಯ್ಕೆ ಮಾಡಲಾಯಿತು. ನರಸಿಂಹ ಸ್ವಾಗತಿಸಿ , ಬಾಸ್ಕರ ವಂದಿಸಿ ಶರತ್ ಆರೂರು ಕಾರ್ಯಕ್ರಮ ನಿರೂಪಿಸಿದರು.
ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ದಕ್ಕಬೇಕಾಗಿರುವ ಸವಲತ್ತುಗಳನ್ನು ಈಡೇರಿಸಿ | ಸುಂದರ ಮಾಸ್ತರ್

