ಪಡುಬಿದ್ರಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನಿನ್ ಅರ್ಹ ಮಾತನಾಡಿ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸೌಲಭ್ಯಗಳಿಂದ ಗ್ರಾಹಕರು ತಮ್ಮ ಗುರಿಗಳನ್ನ ಸಾದಿಸಲು ಸ್ವಾವಲಂಬಿಗಳಾಗುತ್ತಿದ್ದು, ಗ್ರಾಹಕರ ಸ್ನೇಹಿಯಾಗಿದೆ. ಗ್ರಾಹಕರು ಸಾಲ ಪಡೆದು ಸಾಲದ ಮರುಪಾವತಿ ಮಾಡಬೇಕಾಗಿದ್ದು, ಅಷ್ಟೇ ಮುಖ್ಯ ಎಂದರು. ಪಡುಬಿದ್ರೆ ಗ್ಲಾಮರ್ ಸ್ನಿಪ್ ಪ್ರೊಫೆಷನಲ್ ಯೂನಿಸೆಕ್ಸ್ ಸೆಲೋನ್‌ನ ನಿಶಾ ಸಂದೇಶ್ ಸಾಲಿಯಾನ್, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಗಣೇಶ್ ದೇವಾಡಿಗ, ಪಡುಬಿದ್ರೆ ಶಾಖಾ ಪ್ರಭಾರ ಪ್ರಬಂಧಕಿ ಅಂಜಲಿ ಉಪಸ್ಥಿತರಿದ್ದರು.ಅಧ್ಯಕ್ಷ ವಸಂತ್ ಬೆರ್ನಾಡ್ ಪ್ರಸ್ತಾವನೆಗೈದರು. ಪ್ರಭಾರ ಪ್ರಬಂಧಕಿ ಅಂಜಲಿ ಸ್ವಾಗತಿಸಿದರು. ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ನಿರೂಪಿಸಿದರು. ಸಿಬ್ಬಂದಿ ರಕ್ಷಿತಾ ಧನ್ಯವಾದ ಅರ್ಪಿಸಿದರು.
ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪಡುಬಿದ್ರಿ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ

