Site icon ಉಡುಪಿ ನ್ಯೂಸ್ ಪ್ಲಸ್

ಉಚ್ಚಿಲ ದಸರಾ-2024

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ವರ್ಷ 3ನೇ ಬಾರಿಯ “ಉಡುಪಿ ಉಚ್ಚಿಲ ದಸರಾ-2024″ ನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರ- ಸಹಯೋಗದೊಂದಿಗೆ ಶಾಸ್ರೋಕ್ತವಾಗಿ, ಸಾಂಪ್ರದಾಯಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಆಚರಿಸಲು ಸಂಕಲ್ಪ ಮಾಡಲಾಗಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪೂರ್ವನಿಗದಿಯಾದ ಈ ಕಾರ್ಯಕ್ರಮವನ್ನು ನೀತಿಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ನಡೆಸಲಾಗುವುದು. ಶ್ರೀ ಕ್ಷೇತ್ರದ ಬ್ರಹ್ಮಕಲಶ, ದಸರಾ ಉತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿರುವ ಉಡುಪಿ ಜಿಲ್ಲಾಡಳಿತ,ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಮಾಧ್ಯಮ ಸ್ನೇಹಿತರ ಸಂಪೂರ್ಣ ಸಹಕಾರವನ್ನು ಈ ಬಾರಿಯೂ ಬಯಸುತ್ತಿದ್ದೇವೆ. ವಿದ್ಯುದ್ದೀಪಾಲಂಕಾರ ಉದ್ಘಾಟನೆ: ದಿನಾಂಕ:02-10-2024ರ ಸಂಜೆ ಗಂಟೆ 6.30 ಪಡುಬಿದ್ರಿಯಿಂದ ಕಾಪು ಸಮುದ್ರತೀರದ ದೀಪಸ್ತಂಭದವರೆಗಿನ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಪ್ರಾಯೋಜಕರು: ಡಾ| ಕೆ. ಪ್ರಕಾಶ್ ಶೆಟ್ಟಿ (ಅಧ್ಯಕ್ಷರು MRG ಗ್ರೂಪ್)

ಅಕ್ಟೋಬರ್ 3ರಿಂದ 12ರವರೆಗೆ “ಉಡುಪಿ ಉಚ್ಚಿಲ ದಸರಾ-2024″ ರ ಪ್ರಯುಕ್ತ ಪ್ರತೀದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು:

•ಲೇಸರ್ ಶೋ : ಪ್ರತೀದಿನ ರಾತ್ರಿ ಗಂಟೆ 8.00ರಿಂದ ದಸರಾ ಮಹೋತ್ಸವ ಹಾಗೂ ಶ್ರೀ ಕ್ಷೇತ್ರದ ಮಹತ್ವದ ಬಗ್ಗೆ ವಿಶೇಷ ಲೇಸರ್ ಶೋ ನಡೆಯಲಿದೆ.

. • ಡೋನ್ ಮೂಲಕ ಮಷ್ಪಾರ್ಚನೆ: ನವದುರ್ಗೆಯರಿಗೆ ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡೋನ್ ಮೂಲಕ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಕೂಡ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದೆ.

•ದಸರಾ ಪ್ರಯುಕ್ತ ನಡೆಯಲಿರುವ ವಿವಿಧ ಸ್ಪರ್ಧೆಗಳು; ನೃತ್ಯ ಸ್ಪರ್ಧೆ, ಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಹೆಣ್ಣುಮಕ್ಕಳ ಹುಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ,ಕುಸ್ತಿ ಸ್ಪರ್ಧೆ, ದೇಹದಾಡ್ಯ ಸ್ಪರ್ಧೆ,

ಶೋಭಾಯಾತ್ರೆ: ಅಕ್ಟೋಬರ್ 12, ಶನಿವಾರ, ಅಪರಾಹ್ನ ಗಂಟೆ 3.00

Exit mobile version