Site icon ಉಡುಪಿ ನ್ಯೂಸ್ ಪ್ಲಸ್

ಸೆಪ್ಟೆಂಬರ್ 01 ರಂದು SDPI ಉಡುಪಿ (ಕಾಪು ) ವಿಧಾನ ಸಭಾ ಸಮಿತಿಯ ಕ್ಷೇತ್ರ ಪ್ರತಿನಿಧಿ ಸಭೆ

ಕಾಪು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ (ಕಾಪು ) ವಿಧಾನ ಸಭಾ ಸಮಿತಿಯ ಕ್ಷೇತ್ರ ಪ್ರತಿನಿಧಿ (ARC) ಸಭೆ ಸಪ್ಟಂಬರ್ 01 ರಂದು ಆದಿತ್ಯವರು ಉಚ್ಚಿಲ ತವಕ್ಕಲ್ ಹಾಲ್ ಸಭಾಂಗಣದಲ್ಲಿ ಮಧ್ಯಾಹ್ನ 12:30 ಕ್ಕೆ ನಡೆಯಲಿದೆ. SDPI ಪಕ್ಷದ ಆಂತರಿಕ ಚುನಾವಣೆಯು ದೇಶದೆಲ್ಲೆಡೆ ನಡೆಯುತ್ತಿದ್ದು ಇದರ ಭಾಗವಾಗಿ ಕ್ಷೇತ್ರ ಸಮಿತಿಯ ಪ್ರತಿನಿಧಿ ಸಭೆ ಉಚ್ಚಿಲ ತವಕ್ಕಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಕ್ಷೇತ್ರ ಅಧ್ಯಕ್ಷರಾದ ಹನೀಫ್ ಮೂಳೂರು ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಭೆಯಲ್ಲಿ ಕ್ಷೇತ್ರ ಸಮಿತಿಯ 2024 – 2027 ರ ಅವಧಿಗೆ ಹೊಸ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕ್ಷೇತ್ರ ಪ್ರತಿನಿಧಿ ಸಭೆಗೆ ಮುಖ್ಯ ಅತಿಥಿಗಳಾಗಿ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ , ರಾಜ್ಯ ಸಮಿತಿ ಸದಸ್ಯರಾಗಿರುವ ಹಾಗೂ ಉಡುಪಿ ಜಿಲ್ಲೆ ಉಸ್ತುವಾರಿಯೂ ರಿಯಾಝ್ ಕಡಂಬು ಮತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಭಾವ,ಜಿಲ್ಲಾ ಕಾರ್ಯದರ್ಶಿ ಯಾದ ಮಜೀದ್ ಪೊಲ್ಯ, ಜಿಲ್ಲಾ ಸಮಿತಿ ಸದಸ್ಯರಾದ ಸಂಶು ಉಡುಪಿ, ಜಿಲ್ಲಾ ಸಮಿತಿ ಸದಸ್ಯರಾದ ರಜಾಕ್ ವೈಸ್, wim ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ, wim ಕಾಪು ಕ್ಷೇತ್ರ ಅಧ್ಯಕ್ಷೆ ಫಾರ್ಜನ ಹಮೀದ್, ಹಾಗೂ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು , ಅತಿಥಿಗಳಾಗಿ ಆಗಮಿಸಲಿದ್ದಾರೆ
. ಕ್ಷೇತ್ರ ವ್ಯಾಪ್ತಿಯ SDPI ಪಕ್ಷದ ಚುನಾಯಿತ ಜನಪ್ರತಿನಿಧಿಗಳು , ಗ್ರಾಮ ಸಮಿತಿಯ ನಾಯಕರುಗಳು , ವಿಶೇಷ ಆಹ್ವಾನಿತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು SDPI ಕಾಪು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮಲ್ಲಾರ್, ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version