Site icon ಉಡುಪಿ ನ್ಯೂಸ್ ಪ್ಲಸ್

ಹಿರಿಯೂರು : ಛಾಯಾಗ್ರಾಹಕರ ಹೆಚ್.ಪಿ.ಎಲ್.ಪೋಟೋ ಲೀಗ್ ಟ್ರೋಫಿ ಉಡುಪಿಗೆ ಚಾಂಪಿಯನ್ , ಶಿವಮೊಗ್ಗ ಗ್ಯಾಡಿಏಟರ್ಸ್ ರನ್ನರ್ ಅಪ್ ಪ್ರಶಸ್ತಿ

ನೆಹರು ಮೈದಾನದಲ್ಲಿ ಜು.5ರಿಂದ 7ರವರೆ ಜಿಲ್ಲಾ ಮತ್ತು ತಾಲೂಕು ವೃತ್ತಿ ನಿರತ ಛಾಯಾಚಿತ್ರಗ್ರಾಹಕರ ವತಿಯಿಂದ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯದಲ್ಲಿ ಉಡುಪಿ ತಂಡ ವಿಜಯಿಯಾಗಿ 75 ಸಾವಿರ ಮತ್ತು ಕಪ್ಪನ್ನು ಪಡೆ ಯಿತು. ರನ್ನರ್ ಆಪ್ ಟ್ರೋಪಿಯನ್ನು ಶಿವಮೊಗ್ಗ ಗ್ಯಾಡಿಏಟರ್ಸ್ ತಂಡ 50 ಸಾವಿರ ಬಹುಮಾನ ಪಡೆ ಯಿತು. ಶಿವಮೊಗ್ಗ ಮಲೆನಾಡು ತಂಡ ತೃತೀಯ ಸ್ಥಾನ ಪಡೆದು ಬಹುಮಾನ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್ ಬಹುಮಾನ ವಿತರಿಸಿ ಮಾತನಾಡಿ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ. ಅದನ್ನು ಜೀವನದ ಒಂದು ಭಾಗವೆಂದು ಪರಿಗಣಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯ ಎಂದರು. ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ್, ಎಪಿಎಂಸಿ ಸದಸ್ಯ ಎನ್.ಚಿತ್ತಯ್ಯ, ಯುವ ಮುಖಂಡ ಎನ್.ಧನಂಜಯ, ಛಾಯಾಗ್ರಾಹಕರ ಸಂಘದ ಮುಖಂಡ ಎಂ. ಎಲ್.ಗಿರಿಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ರ ಸ್ಟುಡಿಯೋ ನಾಗಣ್ಣ, ಗೋವಿಂದಪ್ಪ, ಸಪ್ತಗಿರಿ ಸ್ಟುಡಿಯೋ ಗೋವಿಂದ್, ಲಿಂಗರಾಜ್, ಚಂದು, ಗೌಸ್ ನಯಾಜ್, ತಿಪ್ಪೇಸ್ವಾಮಿ ಇದ್ದರು. ಹಿರಿಯೂರು ನಗರದ ನೆಹರು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿ ಛಾಯಾಗ್ರಾಹಕರ ಸಂಘ ತಂಡಕ್ಕೆ ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್ ಬಹುಮಾನ ವಿತರಿಸಿದರು

Exit mobile version