ಶಿರ್ವ; ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಇಂದು, ನೈಋತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಡಾ. ಕೆ. ಕೆ.ಮಂಜುನಾಥ್ ಕುಮಾರ್ (ಮಾಷ್ಟ್ರು) ಇವರ ಪರವಾಗಿ ಕಾಪು ವಿ.ಸ. ಕ್ಷೇತ್ರ ವ್ಯಾಪ್ತಿಯ ಶಿರ್ವಾ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆ, ಸೈನ್ಟ್ ಮೇರೀಸ್ ಕಾಲೇಜು , ಎಂ.ಎಸ್.ಆರ್.ಎಸ್. ಕಾಲೇಜಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಶಿಕ್ಷಕರ ಪ್ರಮುಖ ಬೇಡಿಕೆಯಾದ ಶಿಕ್ಷಕರ ಪಿಂಚಣಿ ಸಮಸ್ಯೆಯನ್ನು ಹಿಂದಿನ ಪಿಂಚಣಿ ವ್ಯವಸ್ಥೆಯಂತೆ ಮುಂದುವರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಶಿಕ್ಷಕರ ಮತ್ತು ಪಾದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸುವ ನಿಟ್ಟಿನಲ್ಲಿ ಎರಡೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಹುಮತದಿಂದ ಚುಣಾಯಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಪು ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ, ಮತ್ತು ಮುಖಂಡರಾದ ನಾಗೇಶ್ ಉದ್ಯಾವರ್, ವಿಲ್ಸನ್ ರಾಡ್ರಿಗಸ್, ರಾಯ್ಸ್ ಫೆರ್ನಾಂಡಿಸ್, ಹಸನಬ್ಬ ಶೇಖ್, ಗ್ಲಾಡಿಸ್ ಅಲ್ಮೇಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಚುನಾವಣೆ – ಕಾಂಗ್ರೆಸ್ ಅಭ್ಯರ್ಥಿಗಳ ಪರ ಸೊರಕೆ ಪ್ರಚಾರ.

