Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಕೋಟ ಶ್ರೀ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಕೋಟ ಶ್ರೀ ಶ್ರೀನಿವಾಸ ಪೂಜಾರಿಯವರು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ ವಿ ಶೆಟ್ಟಿ ಯವರ ಕಚೇರಿಗೆ ದಿನಾಂಕ 30.03.2024ನೆ ಶನಿವಾರ,ಭೇಟಿ ನೀಡಿದ ಸಂದರ್ಭ ಅವರನ್ನು ಯೋಗೇಶ್ ವಿ ಶೆಟ್ಟಿ ಮತ್ತು ಪಕ್ಷ ಸಂಗಡಿಗರೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭ ಅವರೊಂದಿಗೆ, ಕಾಪು ಶಾಸಕರಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್, ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಬಿಜೆಪಿ ಪ್ರಮುಖರಾದ ನವೀನ್ ಶೆಟ್ಟಿ, ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ನಮ್ಮ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯರಾಮ ಆಚಾರ್ಯ, ರಾಜ್ಯ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಗಂಗಾಧರ ಬಿರ್ತಿ, ಕಾಪು ಬ್ಲಾಕ್ ಅಧ್ಯಕ್ಷರಾದ ಇಕ್ಬಾಲ್ ಅತ್ರಾಡಿ,ಜೆಡಿಎಸ್ ಪುರಸಭೆ ಸದಸ್ಯಉಮೇಶ್ ಕರ್ಕೇರ, ದೇವರಾಜ ತೊಟ್ಟಂ,ಕಾರ್ಕಳ ಬ್ಲಾಕ್ ಅಧ್ಯಕ್ಷರಾದ ಶ್ರೀಕಾಂತ ಹೆಬ್ರಿ,ಯುವ ಜನತಾದಳ ಅಧ್ಯಕ್ಷರಾದ ಸಂಜಯ್ ಕುಮಾರ್, ರಮೇಶ್ ಕುಂದಾಪುರ, ಹುಸೇನ್ ಹೈಕಾಡಿ, ಕೀರ್ತಿರಾಜ್, ಚಂದ್ರಹಾಸ ಏರ್ಮಲ್, ಸುರೇಶ್ ದೇವಾಡಿಗ, ವೆಂಕಟೇಶ್ ಎಂ ಟಿ, ಆಶ್ರಫ್ ಪಡುಬಿದ್ರಿ, ರಂಗ ಆರ್ ಕೋಟ್ಯಾನ್, ವಿನ್ಸೆಂಟ ಸುನಿಲ್ ಅಲ್ಮೇಡ,ಹರಿಣಿ ಆರ್ ಕೋಟ್ಯಾನ್, ವಸುಮತಿ, ಯು ಆರ್ ರಶೀದ್,ಪದ್ಮನಾಭ ಆರ್ ಕೋಟ್ಯಾನ್, ಮತ್ತು ನಾಯಕರು ಪಕ್ಷ ಕಾರ್ಯಕರ್ತರು ಭಾಗವಹಿಸಿದರು.

Exit mobile version