Site icon ಉಡುಪಿ ನ್ಯೂಸ್ ಪ್ಲಸ್

ಸವಿತಾ ಎರ್ಮಾಳ್ ರಾಯಭಾರಿಯಾಗಿ ಆಯ್ಕೆ

ಸವಿತಾ ಎರ್ಮಾಳ್, ಉಪನ್ಯಾಸಕರು, ಸರಕಾರಿ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇವರನ್ನು “ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ” (ಭೇಟಿ ಬಚಾವೊ ಭೇಟಿ ಪಡಾವೊ) ಮತ್ತು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ರಾಯಭಾರಿ ಯಾಗಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಯವರಾದ .ಕೆ.ವಿದ್ಯಾಕುಮಾರಿ (ಭಾ.ಆ. ಸೇ.) ಆಯ್ಕೆ ಮಾಡಿರುತ್ತಾರೆ. ಇವರು ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬ್ರಹ್ಮಾವರ ಇದರ ಕಾರ್ಯದರ್ಶಿ ಯಾಗಿರುವರು. ಶ್ರೀ ಶಾಂಕರತತ್ವ ಪ್ರಸಾರ ಸಮಿತಿ ಉಡುಪಿ ಜಿಲ್ಲೆಯ ಸಹಸಂಚಾಲಕ ರಾಗಿರುವರು. ಬ್ರಹ್ಮಾವರದ ಸಮಿತಿಯ ಕಾರ್ಯದರ್ಶಿಯಾಗಿರುವರು. ಅಲ್ಲದೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಇದರ ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಇದರ ಮಂಗಳೂರು ವಿಭಾಗದ ವಿಭಾಗಾಧಿಕಾರಿಯಾಗಿ ಮಾನ್ಯ ನಿರ್ದೇಶಕರು ನಿಯೋಜಿಸಿ ರುವರು.

Exit mobile version