Site icon ಉಡುಪಿ ನ್ಯೂಸ್ ಪ್ಲಸ್

ದೇಶ ಕಂಡ ಇದುವರೆಗಿನ ಅತ್ಯುತ್ತಮ ಪ್ರಧಾನಿ ಇಂದಿರಾಗಾಂಧಿ : ಗಣನಾಥ ಎಕ್ಕಾರ್

ಭಾರತದ ಆರ್ಥಿಕ ಪರಿಸ್ಥಿತಿಯು ಸ್ವಾತಂತ್ರ್ಯದ ನಂತರ ಕ್ಷೀಣ ಗತಿಯಲ್ಲಿದ್ದ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಯನ್ನು ಹಿಡಿದಿದ್ದ ಇಂದಿರಾಗಾಂಧಿ ಯವರು 1975ರಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಘೋಷಿಸುವ ಮೂಲಕ ದೇಶದ ಆರ್ಥಿಕತೆಯ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದರು. ಒಂದು ಆಂದೋಲನದ ರೀತಿಯಲ್ಲಿ ಜಾರಿಗೆ ತಂದ ತನ್ನ “ಗರೀಬಿ ಹಠಾವೋ” ಕಾರ್ಯಕ್ರಮ ದಡಿಯಲ್ಲಿ ಜನಸಾಮಾನ್ಯರ ಬದುಕಿನಲ್ಲಿ ನೆಮ್ಮದಿಯ ಮಂದಹಾಸವನ್ನು ಬೀರುವಂತೆ ಮಾಡಿದ ಖ್ಯಾತಿ ದಿ. ಇಂದಿರಾಗಾಂಧಿ ಯವರಿಗೆ ಸಲ್ಲತ್ತದೆ, ಅವರು ಭಾರತ ದೇಶ ಇದುವರೆಗೆ ಕಂಡಂತಹ ಅತ್ತ್ಯುತ್ತಮ ಪ್ರಧಾನಿ ಎಂದು ಖ್ಯಾತ ಲೇಖಕರು ಹಾಗೂ ನಿವೃತ್ತ ಪ್ರಾಂಶುಪಾಲ ರಾದ ಶ್ರೀ. ಗಣನಾಥ್ ಎಕ್ಕಾರ್ ರವರು ಬಣ್ಣಿಸಿದರು.
ಅವರು, ಕಾಪು “ರಾಜೀವ್ ಭವನ ” ದಲ್ಲಿ ನಡೆದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಯವರ 106 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತ್ತಾ, ಬಡವರಿಗೆ ಭೂ ಒಡೆತನದ ಹಕ್ಕು, ಜಮೀನು ರಹಿತ ನಿರ್ವಸತಿಕರಿಗೆ ವಸತಿ ನೀಡುವ ಯೋಜನೆ, ಸಾರ್ವಜನಿಕ ಉದ್ದಿಮೆಗಳ ವಿಕಾಸಕ್ಕೆ ಉತ್ತೇಜನ, ಬ್ಯಾಂಕುಗಳ ರಾಷ್ಟ್ರೀಕರಣ, ಆದಾಯ ಮತ್ತು ಉದ್ಯೋಗ ಅವಕಾಶಗಳಲ್ಲಿದ್ದ ತಾರತಮ್ಯ ನಿವಾರಣೆ ಮುಂತಾದ ಕ್ರಾಂತಿಕಾರಿ ಯೋಜನೆಗಳ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ಜೊತೆಗೆ ಜನಸಾಮಾನ್ಯರು ಕೂಡ ನೆಮ್ಮದಿಯ, ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಳ್ಳಲು ಸಹಕಾರಿಯಾದರು.
1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿದ್ದು, ಭಾರತದ ಗಡಿಭಾಗವನ್ನು ಅತಿಕ್ರಮಿಸಿದ್ದ ಚೀನಾವನ್ನು ತನ್ನ ದಿಟ್ಟ ನಿಲುವು ಹಾಗೂ ತಂತ್ರಗಾರಿಕೆಯಿಂದ ಹಿಮ್ಮೆಟ್ಟಿಸಿದ್ದು ಅವರ ಚಾಣಾಕ್ಷ ಆಡಳಿತಕ್ಕೆ ಸಾಕ್ಷಿ ಎಂದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಮಾತನಾಡಿ, ಬಡವರ, ಹಿಂದುಳಿದ ವರ್ಗದವರ ಮತ್ತು ದಲಿತರ ಪಾಲಿಗೆ ನಿಜವಾದ ಆಶಾಕಿರಣವಾಗಿ ಮೂಡಿ ಬಂದು ಜನಸಾಮಾನ್ಯರ ಬದುಕನ್ನು ಹಸನು ಗೊಳಿಸಿದ ಒಬ್ಬ ಧೀಮಂತ ನಾಯಕಿ ಹಾಗೂ ದಿಟ್ಟ ಮಹಿಳೆ ಇಂದಿರಾಗಾಂಧಿ ಯವರ ಸಾಧನೆಗಳು ಮತ್ತು ಚಿಂತನೆಗಳು ಎಂದೆಂದಿಗೂ ಅಜರಾಮರ ಎಂದರು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರೊಂದಿಗೆ ಗಣನಾಥ್ ಎಕ್ಕಾರ್ ರವರು ಉದ್ಘಾಟಿಸಿದರು. ಮೊದಲಿಗೆ,ಇತ್ತೀಚೆಗೆ ಉಡುಪಿಯ ನೇಜಾರಿನಲ್ಲಿ ಕ್ರೂರಿಯೊಬ್ಬನ ಪಾಶವೀ ಕೃತ್ಯಕ್ಕೆ ಬಲಿಯಾದ ಒಂದೇ ಕುಟುಂಬದ ನಾಲ್ಕು ಜೀವಗಳಿಗೆ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಮುಖರಾದ ನವೀನ್ ಚಂದ್ರ ಜೆ. ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ಗೀತಾ ವಾಗ್ಲೇ, ವೈ. ಸುಕುಮಾರ್, ಶಾಂತಲತಾ ಶೆಟ್ಟಿ, ಜಿತೇಂದ್ರ ಫುರ್ತಾಡೋ, ಸರಸು ಡಿ. ಬಂಗೇರ, ಐಡಾ ಗಿಬ್ಬಾ ಡಿಸೋಜ, ಮಾಧವ ಪಾಲನ್, ದಯಾನಂದ ಬಂಗೇರ, ಪ್ರಭಾ ಬಿ. ಶೆಟ್ಟಿ, ಪ್ರಶಾಂತ್ ಜತ್ತನ್ನ, ರೋಷನ್ ಶೆಟ್ಟಿ, ಮಹಮ್ಮದ್ ಸಾದಿಕ್, ರಮೀಜ್ ಹುಸೇನ್, ದೀಪಕ್ ಏರ್ಮಾಳ್, ರತನ್ ಶೆಟ್ಟಿ, ಸಿಮ್ಮಿ ಡಿಸೋಜ, ಶೋಭಾ ಬಂಗೇರ, ಸತೀಶಚಂದ್ರ ಮೂಳೂರ್, ಆಸೀಫ್ ಮೂಳೂರ್, ವಿದ್ಯಾಲತಾ, ಅಶ್ವಿನಿ ಬಂಗೇರ, ಲಕ್ಷ್ಮೀಶ್ ತಂತ್ರಿ, ಹರೀಶ್ ನಾಯಕ್, ಬಾಲಕೃಷ್ಣ ಆರ್. ಕೋಟ್ಯಾನ್, ರೋಹನ್ ಕುತ್ಯಾರ್, ಮೊಹಮ್ಮದ್ ನಯೀಮ್, ರಂಜನಿ ಹೆಗ್ಡೆ, ಹಸನಬ್ಬ ಶೇಕ್, ರಹಿಮಾನ್ ಕಣ್ಣಂಗಾರ್, ಕೇಶವ್ ಸಾಲ್ಯಾನ್, ಸುಧೀರ್ ಕರ್ಕೇರ, ಕರುಣಾಕರ್ ಪೂಜಾರಿ, ಯಶವಂತ ಪಲಿಮಾರ್, ರಫೀಕ್ ದೀವು, ಡೇವಿಡ್ ಡಿಸೋಜ, ವಿಮಲಾ ದೇವಾಡಿಗ, ನಾಗಭೂಷನಣ್ ರಾವ್, ರಾಜೇಶ್ ಶೆಟ್ಟಿ ಪಾಂಗಳ, ಶ್ರೀಕರ್ ಅಂಚನ್, ದೇವರಾಜ್ ಕೋಟ್ಯಾನ್, ಹಸನ್ ಕಂಚಿನಡ್ಕ, ಬಬ್ಬಣ್ಣ ನಾಯಕ್, ಅಶೋಕ್ ನಾಯರಿ, ಪ್ರಭಾಕರ್ ಆಚಾರ್ಯ, ಕಾರ್ತಿಕ್ ಅಮೀನ್ ಮತ್ತು ಗ್ರಾಮ ಪಂಚಾಯತ್ ಗಳ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗಳಾದ ಅಮೀರ್ ಕಾಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಸಿದರು, ದಿನೇಶ್ ಕೋಟ್ಯಾನ್ ಪಲಿಮಾರ್ ವಂದಿಸಿದರು.

Exit mobile version