ಪಡುಬಿದ್ರೆ, ಅ.24: ದ.ಕ.ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ-2023 ಶೋಭಾಯಾತ್ರ ನಡೆಯಿತು. ಉಚ್ಚಿಲ ದಸರಾ ರೂವಾರಿ ಡಾ.ಜಿ. ಶಂಕರ್, ಗುರ್ಮ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಉದ್ಯಮಿ ಪ್ರಕಾಶ್ ಶೆಟ್ಟಿ, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮತ್ತಿತರ ಗಣ್ಯರು ಶೋಭಾಯಾತ್ರೆಗೆ ಚಾಲನೆ ನೀಡಿದರು. 40ಕ್ಕೂ ಅಧಿಕ ವಿಶೇಷ ಟ್ಯಾಬ್ಲೊಗಳು ದಶವಿಗ್ರಹಗಳನ್ನೊಳಗೊಂಡ 10 ವಿಶೇಷ ಟ್ಯಾಬ್ಲೊಗಳೊಂದಿಗೆ ಶೋಭಾಯಾತ್ರೆ ನಡೆಯಿತು. ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿವೇಷಗಳು, ಚಂಡೆ ಬಳಗ, ನಾದ ಸರ, ನಾಸಿಕ್ ಬ್ಯಾಂಡ್ ತಂಡಗಳು ಸಹಿತ ಟ್ಯಾಬ್ಲೋಗಳು ಭಾಗವಹಿದವು ಶೋಭಾಯಾತ್ರೆಯಲ್ಲಿ ಸಾಮಾಜಿಕ ಪರಿಕಲ್ಪನೆಯ 4 ಲೈವ್ ಟ್ಯಾಬ್ಲೊಗಳು, ಸ್ವಚ್ಛತಾ ಟ್ಯಾಬ್, ಸಮಿತಿಯ ತೀರ್ಮಾನದಂತೆ ಈ ಬಾರಿ ದುಂದು ವೆಚ್ಚ ಮಾಡದೆ ಶಿಸ್ತುಬದ್ಧ ಹಾಗೂ ಅಚ್ಚುಕಟ್ಟಿನ ದಸರಾ ಮಹೋತ್ಸವ ನಡೆಸಲಾಯಿತು. ಹೆದ್ದಾರಿ 66ರ ಉಚ್ಚಿಲದಿಂದ ಎರ್ಮಾಳು- ಉಚ್ಚಿಲ-ಮೂಳೂರು-ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್ ವರೆಗೆ ನಡೆಯಿತು. ಶೋಭಾಯಾತ್ರೆಗೆ ಉಚ್ಚಿಲದಿಂದ ಎರ್ಮಾಳು ಹಾಗೂ ಎರ್ಮಾಳಿನಿಂದ ಕೊಪ್ಪಲಂಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನಸಾಗರವೆ ಸೇರಿತ್ತು. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.
ಉಚ್ಚಿಲ ದಸರಾ 2023ರ : ಸಂಭ್ರಮದ ಮೆರವಣಿಗೆ

