ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸೇವಾದಳದ ರಾಜ್ಯ ಅಧ್ಯಕ್ಷರಾದ ಮಾನ್ಯ ಶ್ರೀ ರಾಮಚಂದ್ರ.ಎಂ ರವರು ದಿನಾಂಕ :08/10/2023 (ಆದಿತ್ಯವಾರ) ರಂದು ಸಮಯ ಬೆಳಿಗ್ಗೆ ಗಂಟೆ 9:30 ಕ್ಕೆ ಸರಿಯಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಬ್ರಹ್ಮಗಿರಿ ಗೆ ಭೇಟಿ ನೀಡಿ ಸೇವಾದಳದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿರುವರು. ಈ ಸಭೆಯಲ್ಲಿ ಮುಖ್ಯವಾಗಿ ಇದೇ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಸೇವಾದಳ ಸಮಾವೇಶದ ಬಗ್ಗೆ ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆಯುವ 100ನೇ ವರ್ಷದ ಆಚರಣೆಯ ಬಗ್ಗೆ ಸಮಾಲೋಚನೆ ನಡೆಯಲಿರುವುದು. ಆದುದರಿಂದ ಜಿಲ್ಲೆಯ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸೇವಾದಳದ ಕಾರ್ಯಕರ್ತರು ಪಾಲ್ಗೊಳ್ಳಬೇಕಾಗಿ ಕಿಶೋರ್ ಕುಮಾರ್ ಎರ್ಮಾಳ್ , ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ
08/10/2023 ರಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷ ರಾಮಚಂದ್ರ.ಎಂ ಉಡುಪಿಗೆ ಭೇಟಿ

