Site icon ಉಡುಪಿ ನ್ಯೂಸ್ ಪ್ಲಸ್

ಬ್ರಹ್ಮಾವರ – ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, “ಬೃಹತ್ ಪ್ರತಿಭಟನಾ ಸಭೆ

ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಬ್ರಹ್ಮಾವರ. ಇದರ ಹಳೆ ಸಾಮಾಗ್ರಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವುದರ ಮೂಲಕ ಅವ್ಯವಹಾರ ನಡೆಸಿ ಕಾರ್ಖಾನೆಯ ಸದಸ್ಯರಿಗೆ ಮತ್ತು ರೈತರಿಗೆ ವಂಚಿಸಿರುವ ಆಡಳಿತ ಮಂಡಳಿಯ ವಿರುದ್ಧ ದಿನಾಂಕ 09/10/2023, ಸೋಮವಾರ ದಂದು ಬೆಳಿಗ್ಗೆ 10.00 ಗಂಟೆಗೆ, ಬ್ರಹ್ಮಾವರ – ಸಕ್ಕರೆ ಕಾರ್ಖಾನೆಯ ಎದುರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ, ಎಲ್ಲಾ ಬ್ಲಾಕ್ ಸಮಿತಿಗಳ ಸಹಭಾಗಿತ್ವದಲ್ಲಿ, “ಬೃಹತ್ ಪ್ರತಿಭಟನಾ ಸಭೆ” ಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ, ಕಾಪು ವಿ.ಸ. ಕ್ಷೇತ್ರದ ಉಭಯ ಬ್ಲಾಕ್ ಗಳ ಎಲ್ಲಾ ಮುಖಂಡರು, ಎಲ್ಲಾ ಮುಂಚೂಣಿ ಹಾಗೂ ಇತರೆ ಸಮಿತಿ / ಘಟಕಗಳ ಅಧ್ಯಕ್ಷರು / ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಉಭಯ ಬ್ಲಾಕ್ ಸಮಿತಿಗಳ ಅಧ್ಯಕ್ಷರುಗಳು ಪತ್ರಿಕಾ ಹೇಳಿಕೆಯ ಮೂಲಕ ಕೋರಿರುತ್ತಾರೆ.

Exit mobile version