Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಸಮಾನ ಮನಸ್ಕರ ಬ್ರಹತ್ತ್ ಪ್ರತಿಭಟನೆಗೆ : ದ.ಸಂ.ಸ. ಬೆಂಬಲ.

ಇದೇ ನಾಡಿದ್ದು ಆಗಸ್ಟ್ 2 ರಂದು ಮಣಿಪುರದಲ್ಲಿ ನಡೆದಿರುವ ಮತ್ತು ಇಂದಿಗೂ ನಡೆಯುತ್ತಲೇ ಇರುವ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಉಡುಪಿಯಲ್ಲಿ ನಡೆಯುವ ಬ್ರಹತ್ತ್ ಪ್ರತಿಭಟನೆ ಮತ್ತು ಕಾಲ್ನಡಿಗೆ ಜಾತಾಕ್ಕೆ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ತನ್ನ ಸಂಪೂರ್ಣ ಬೆಂಬಲ ಹಾಗೂ ಸಹಕಾರವನ್ನು ಘೋಷಿಸಿದೆ. ಉಡುಪಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಮತ್ತು ದಲಿತ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಗೂ ಸಮಾನ ಮನಸ್ಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಒಕ್ಕೊರಳಿನಿಂದ ಖಂಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಉಡುಪಿ ಜಿಲ್ಲೆಯ ಪ್ರಮುಖ ದಲಿತ ಸಂಘಟನೆಗಳ ನಾಯಕರಾದ ಶ್ರೀ. ಸುಂದರ ಮಾಸ್ತರ್ , ಮಂಜುನಾಥ ಗಿಳಿಯಾರು , ಶ್ಯಾಮರಾಜ್ ಬಿರ್ತಿ , ವಾಸುದೇವ ಮುಧೂರು ,ರಮೇಶ್ ಕೋಟ್ಯಾನ್ , ವಿಶ್ವನಾಥ್ ಬೈರಂಪಳ್ಳಿ , ಆನಂದ ಬ್ರಹ್ಮಾವರ , ಪರಮೇಶ್ವರ ಉಪ್ಪೂರು , ಭಾಸ್ಕರ ಮಾಸ್ಟರ್ , ಸುರೇಶ ಹಕ್ಲಾಡಿ , ಶ್ಯಾಮಸುಂದರ್ ತೆಕ್ಕಟ್ಟೆ , ಮಂಜುನಾಥ ಬಾಳ್ಕುದ್ರು , ಅಣ್ಣಪ್ಪ ನಕ್ರೆ , ರಾಜು ಬೆಟ್ಟಿನಮನೆ , ಮೊದಲಾದವರು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

Exit mobile version