ಉಡುಪಿ ನ್ಯೂಸ್ ಪ್ಲಸ್

ನೂತನ ಗೃಹ ಸಚಿವ ಡಾ. ಜಿ ಪರಮೇಶ್ವರ್‌ಗೆ ಗಡಿಭಾಗ ಹೆಜಮಾಡಿಯಲ್ಲಿ ಅದ್ಧೂರಿ ಸ್ವಾಗತ

ಕರ್ನಾಟಕ ಸರ್ಕಾರದ ನೂತನ ಗೃಹ ಸಚಿವರಾಗಿ ನೇಮಕಗೊಂಡಿರುವ ಸನ್ಮಾನ್ಯ ಡಾ. ಜಿ.ಪರಮೇಶ್ವರ್ ರವರಿಗೆ ಮಂಗಳವಾರ ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನೂತನ ಗೃಹ ಸಚಿವರಾದ ನಂತರ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಸನ್ಮಾನ್ಯ ಸಚಿವರನ್ನು, ಜಿಲ್ಲೆಯ ಗಡಿಭಾಗವಾದ, ಹೆಜಮಾಡಿ ಟೋಲ್ ಗೇಟ್ ನ ಹತ್ತಿರ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ,ಕಾಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ನವೀನ್ ಚಂದ್ರ ಎಸ್. ಸುವರ್ಣ ನವೀನ್ ಚಂದ್ರ ಜೆ ಶೆಟ್ಟಿ  ಸುನಿಲ್‌ ಡಿ ಬಂಗೇರ, ಆಮೀರ್, ಎಂ ಎಸ್ ಶಾಫಿ ದಿನೇಶ್   ದೀವಾಕರ್ ಶೆಟ್ಟಿ ಗಣೇಶ್  ಕೋಟ್ಯಾನ್  ಹರೀಶ್ ನಾಯಕ್ , ಅಝೀಜ್ ಹೆಜಮಾಡಿ ಶೇಖರ್ ಹೆಜಮಾಡಿ   ರತನ್ ಶೆಟ್ಟಿ , ಶರ್ಫುಧ್ಧೀನ್ ಶೇಖ್  , ರಮೀಝ್ ಹುಸೈನ್, , ಸುದೀರ್ ಕರ್ಕರ, ಕ ಡಿಸೋಜ, ದೀಪಕ್ ಕುಮಾರ್ ಎರ್ಮಾಳ್, ಆಸೀಫ್ ಹನ್ನನ್ ಪ್ರಭಾ ಶೆಟ್ಟಿ , ಅಶ್ವಿನಿ  ಪ್ರಭಾಕರ ಆಚಾರ್ಯ ಶೇಖಬ್ಬ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು

Exit mobile version