ಉಡುಪಿ ನ್ಯೂಸ್ ಪ್ಲಸ್

ಪುತ್ತಿಗೆ ಮಠದ “ಅಕ್ಕಿ ಮುಹೂರ್ತ” ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಮುಂಬರುವ ಪರ್ಯಾಯದ ಪೂರ್ವ ತಯಾರಿಗಾಗಿ ಇಂದು ದಿನಾಂಕ 25-05-2023 ರಂದು ಪುತ್ತಿಗೆ ಮಠದಲ್ಲಿ “ಅಕ್ಕಿ ಮಹೂರ್ತ” ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು.ಪರ್ಯಾಯಕ್ಕೆ ಅಕ್ಕಿ ಅತ್ಯವಶ್ಯಕವಾಗಿರುವುದರಿಂದ ಇಂದು “ಅಕ್ಕಿ ಮುಹೂರ್ತ” ನೆರವೇರಿಸಲಾಯಿತು. ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು.

Exit mobile version