Site icon ಉಡುಪಿ ನ್ಯೂಸ್ ಪ್ಲಸ್

ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತಾಯಾಚನೆ

ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭೇಟಿ ನೀಡಿ ಮಾತಾಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿಯವರು ಕಾರ್ಯಕರ್ತರ ಹುಮ್ಮಸ್ಸು, ಹಾಗೂ ಜನತೆಯ ಪ್ರೀತಿಯನ್ನು ನೋಡಿದಾಗ,ನನ್ನ ವಿಶ್ವಾಸ ಇಮ್ಮಡಿಯಾಗಿದೆ, ಜನತೆಯ ಹಿತಕ್ಕಾಗಿ ಹಗಲಿರುಳು ದುಡಿಯುತೇನೆ ಎಂಬ ಭರವಸೆ ಕೊಟ್ಟರು. ಈ ಸಂದರ್ಭದಲ್ಲಿ,ಪಂಚಾಯತ್ ಅಧ್ಯಕ್ಷರು ಸುಧಾಕರ್ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜೆರಲ್ ಫೆರ್ನಾಂಡಿಸ್,ಪಂಚಾಯತ್ ಉಪಾಧ್ಯಕ್ಷರು ಸಂಧ್ಯಾ ಶೆಟ್ಟಿ,ಪಂಚಾಯತ್ ಸದಸ್ಯರಾದ ಶಶಿಧರ್ ವಾಗ್ಲೆ,ಗುರುರಾಜ್ ಭಟ್, ಅಭ್ಯರ್ಥಿ ಪ್ರಮುಖ್ ಅನಿಲ್ ಕುಮಾರ್,ಪಂಚಾಯತ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version