ಉಡುಪಿ ನ್ಯೂಸ್ ಪ್ಲಸ್

ಕಾಪು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆಸೀಫ್ ಹನ್ನನ್ ನಾಮಪತ್ರ ಹಿಂತೆಗೆತ. ವಿನಯ್ ಕುಮಾರ್ ಸೊರಕೆ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆ

ಕಾಪು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿಆಸೀಫ್ ಹನ್ನನ್ ತಮ್ಮ  ನಾಮಪತ್ರ ವಾಪಾಸು ಪಡೆದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿ  ಜಾತ್ಯಾತೀತ ಮತಗಳ ವಿಭಜನೆಯನ್ನು ತಪ್ಪಿಸುವ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು. ತನ್ನ ಅಪಾರ ಬೆಂಬಲಿಗರ ಜೊತೆಗೆ ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಕಾಂಗ್ರೆಸ್‌ ಪಕ್ಷವನ್ನು ಸೇರಿದರು ಈ ಸಂದರ್ಭದಲ್ಲಿ ಶೇಕ್ ಸೈಯದ್ ಇಬ್ರಾಹಿಂ ಉಚ್ಚಿಲ ನವೀನ್ ಚಂದ್ರ ಸುವರ್ಣ ರಾಜಶೇಖರ್ ಕೋಟ್ಯಾನ್ ಶಪುರ್ದ್ದೀನ್ ಶೇಕ್ ಫಾರೂಕ್ ಚಂದ್ರ ನಗರ ಇಮ್ರಾನ್ ಮಜೂರ್ ದಿನೇಶ್ ಪಾಲಿಮಾರ್ ಉಸ್ಮಾನ್ ಕಾಪು ಮುಂತಾದವರು ಉಪಸ್ಥಿತರಿದ್ದರು

 

 

Exit mobile version