
ಉಡುಪಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಭಾವಿ ಸಭೆ ಬ್ರಹ್ಮಾವರ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಟಪಾಡಿ,ಹಂದಾಡಿ, ಕುಮ್ರಗೋಡು,ಬೆಣ್ಣೆಕುದ್ರು ಗ್ರಾಮದ ಬೂತ್ ಪ್ರಮುಖರ ಭೇಟಿ ಮತ್ತು ಸಭೆಯು ಇಂದು 20/4/23 ರಂದು ನಡೆಯಿತು. ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪ್ರಸಾದ್ ರಾಜ್ ಕಾಂಚನ್,ಕಾಂಗ್ರೆಸ್ ಮುಖಂಡೆ ವೆರೋನಿಕಾ ಕಾರ್ನೆಲಿಯೋ, ಸುಧಾ ಕರ್ ಶೆಟ್ಟಿ ಮೇರ್ಮಾಡಿ,ದಿನಕರ್ ಹೇರೂರು,ಪ್ರಖ್ಯಾತ ಶೆಟ್ಟಿ, ಸೂರ್ಯ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
