ಕಾಪು ತಾಲೂಕಿನ ಉಚ್ಚಿಲದ ಪಣಿಯೂರು – ಹೆದ್ದಾರಿ 66ರ ತಿರುವಿಗೆ ಇಂದು ತಾರ್ಕಿಕ ಅಂತ್ಯಸಿಕ್ಕಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಇಲ್ಲಿಯ ಅವೈಜ್ಞಾನಿಕ ತಿರುವಿನಲ್ಲಿ ಹಲವರು ಪ್ರಾಣತೆತ್ತಿದ್ದು, ಹೆಚ್ಚಿನವರು ಕೈ ಕಾಲು ಮುರಿತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ಮಾಹಿತಿ ನೀಡಿ, ಈ ಅವೈಜ್ಞಾನಿಕ ತಿರುವನ್ನು ಬಂದ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಹೆದ್ದಾರಿ ಇಲಾಖಾ ಗುತ್ತಿಗೆದಾರ ನವಯುಗ ಕಂಪನಿಯವರು ಉಚ್ಚಿಲದ ಅವೈಜ್ಞಾನಿಕ ತಿರುವನ್ನು ಕಾಂಕ್ರೀಟ್ ಸ್ಲಾಬ್ ಅಳವಡಿಸುವ ಮೂಲಕ ತಾರ್ಕಿಕ ಅಂತ ಹಾಡಿದ್ದಾರೆ.