Site icon ಉಡುಪಿ ನ್ಯೂಸ್ ಪ್ಲಸ್

ಅಂಗವಿಕಲರಿಗೆ ಮೋಟೋರೈಸ್ಡ್ ಟ್ರೈಸಿಕಲ್ – ಶಾಸಕ ರಘುಪತಿ ಭಟ್ ವಿತರಣೆ

ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಉಡುಪಿ ವಿಧಾನಸಭಾ ಕ್ಷೇತ್ರದ 5 ಮಂದಿ ಅಂಗವಿಕಲ ಫಲಾನುಭವಿಗಳಿಗೆ ಮೋಟೋರೈಸ್ಡ್ ಟ್ರೈಸಿಕಲನ್ನು ಇಂದು ದಿನಾಂಕ 29-03-2023 ರಂದು ಶಾಸಕ ಶ್ರೀ ಕೆ.ರಘುಪತಿ ಭಟ್ ಅವರು ವಿತರಿಸಿದರು. ರಾಜ್ಯ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೋಟೋರೈಸ್ಡ್ ಟ್ರೈಸಿಕಲ್ ಮಂಜೂರು ಮಾಡಲಾಗಿದ್ದು, ಹೇರೂರು ಗ್ರಾಮದ ಫ್ರಾನ್ಸಿಸ್ ಡಿ ಸೋಜಾ ಮತ್ತು ಸುರೇಶ ಪೂಜಾರಿ, ಕುತ್ಪಾಡಿಯ ರಾಜೇಶ್ ಪೂಜಾರಿ, ಈಶ್ವರನಗರದ ಝನಿತ್ ಪಾಲನ್, ಮಲ್ಪೆಯ ಮುರಳಿಧರ ಇವರಿಗೆ ಶಾಸಕರ ಗೃಹ ಕಚೇರಿಯಲ್ಲಿ ಮೋಟೋರೈಸ್ಡ್ ಟ್ರೈಸಿಕಲ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ರತ್ನ ಸುವರ್ಣ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version