Site icon ಉಡುಪಿ ನ್ಯೂಸ್ ಪ್ಲಸ್

3ನೇ ವರ್ಷದ ಹಡಿಲು ಭೂಮಿ ಕೃಷಿ – ಭತ್ತದ ಚಾಪೆ ನೇಜಿ ತಯಾರಿಕಾ ಘಟಕಕ್ಕೆ ಶಾಸಕ ರಘುಪತಿ ಭಟ್ ಚಾಲನೆ

ಕೇದಾರೋತ್ಥಾನ ಟ್ರಸ್ಟ್ (ರಿ.), ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಬಾರಿ ಉಡುಪಿಯಲ್ಲಿ ಕೈಗೊಂಡಿರುವ 3ನೇ ವರ್ಷದ “ಹಡಿಲು ಭೂಮಿ ಕೃಷಿ” ಮಾಡಲು ಬೇಕಾದ ಭತ್ತದ ಚಾಪೆ ನೇಜಿ ತಯಾರಿಕಾ ಘಟಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿಯಲ್ಲಿ ನಿರ್ಮಿಸಲಾಗಿದ್ದು, ಇಂದು ದಿನಾಂಕ 26-03-2023 ರಂದು ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರು, ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಉದ್ಘಾಟಿಸಿ ಬಳಿಕ ಭೂ ಮಾತೆಗೆ ಹಾಲನ್ನು ಅರ್ಪಿಸಿ ಟ್ರಾಕ್ಟರ್ ಚಲಾಯಿಸಿ 3 ನೇ ವರ್ಷದ ಹಡಿಲು ಭೂಮಿ ಕೃಷಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿಕರಾದ ವನಜಾ ಜಯಕರ್, ಜುಲಿಯನ್ ದಾಂತಿ, ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಣೇಶ್, ಭೂ ಮಾಲಕರಾದ ಶಂಭು ಸನಿಲ್, ಸ್ಥಳೀಯರಾದ ರಿಕೇಶ್ ಹಾಗೂ ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Exit mobile version