ಉಡುಪಿ ನ್ಯೂಸ್ ಪ್ಲಸ್

ಕಾಪುವಿನಲ್ಲಿ ಕಾಂಗ್ರೆಸ್ ವತಿಯಿಂದ ಸೌಹಾರ್ದ- ಇಫ್ತಾರ್ ಕೂಟ

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರ ನೇತೃತ್ವದಲ್ಲಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಹಾಗೂ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಮತ್ತು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಮುಂದಾಳತ್ವದಲ್ಲಿ ಕಾಪು ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್ ನಲ್ಲಿ ಬೃಹತ್ ಸೌಹಾರ್ದ- ಇಫ್ತಾರ್ ಕೂಟವು ಯಶಸ್ವಿಯಾಗಿ ನಡೆಯಿತು.

ಶಿರ್ವ ಆರೋಗ್ಯಮಾತ ಕ್ರೈಸ್ತ ದೇವಾಲಯದ ಸಹಾಯಕ ಧರ್ಮಗುರುಗಳಾದ ರೆ|. ಫಾ|. ರೋಲ್ವಿನ್ ಅರನ್ಹಾ, ಪೊಲಿಪು ಜುಮಾ ಮಸೀದಿಯ ಖತೀಬರಾದ ಜನಾಬ್ ಇರ್ಷಾದ್ ಸ ಆದಿ, ಮತ್ತು ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ರವರು ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ಮತೀಯ ಕಲಹಗಳ ಬಗ್ಗೆ ಬೆಳಕು ಚೆಲ್ಲಿ ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಂತೆ ಸಂದೇಶ ನೀಡಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.


ಕಾಂಗ್ರೆಸ್ ಮುಖಂಡರುಗಳಾದ ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ.ಶೆಟ್ಟಿ, ರಾಜಶೇಖರ ಕೋಟ್ಯಾನ್, ಶಿವಾಜಿ ಸುವರ್ಣ ಬೆಳ್ಳೆ, ಸಂತೋಷ್ ಕುಲಾಲ್, ಹರೀಶ್ ಕಿಣಿ, ಶಾಂತಲತಾ ಎಸ್. ಶೆಟ್ಟಿ, ವಿಲ್ಸನ್ ರಾಡ್ರಿಗಸ್, ಐಡಾ ಗಿಬ್ಬಾ ಡಿಸೋಜ, ಶಬೀ ಖಾಝೀ ವೇದಿಕೆಯಲ್ಲಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮೊಹಮ್ಮದ್ ಸಾದಿಕ್, ದೀಪಕ್ ಎರ್ಮಾಳ್, ಎಚ್.ಅಬ್ದುಲ್ಲಾ, ನವೀನ್ ಎನ್.ಶೆಟ್ಟಿ, ಸುಧಾಕರ .ಕೆ, ಕೆ.ಎಚ್.ಉಸ್ಮಾನ್, ವೈ.ಸುಧೀರ್, ಫಾರೂಕ್ ಚಂದ್ರನಗರ, ರಿಯಾಜ್ ಪಳ್ಳಿ, ಶಾಬು ಸಾಹೇಬ್, ದಿವಾಕರ್ ಬಿ. ಶೆಟ್ಟಿ, ಆಸಿಫ್ ಮೂಳೂರು, ಹಮೀದ್ ಯೂಸುಫ್, ಜೇಬಾ ಸೆಲ್ವನ್, ಜ್ಯೋತಿ ಮೆನನ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಂಜನಿ ಹೆಗ್ಡೆ, ದೀಪ್ತಿ ಮನೋಜ್, ಆಶಾ ಕಟಪಾಡಿ, ಶಾಂತಿ ಪಿರೇರಾ, ಸುಚರಿತ ಪೂಜಾರಿ, ತಸ್ನೀನ್ ಅರಃ, ಕರುಣಾಕರ್ ಪೂಜಾರಿ, ಮೆಲ್ವಿನ್ ಡಿಸೋಜ, ಝಹೀರ್ ಬೆಳಪು, ಗೋಪಾಲ್ ಪೂಜಾರಿ ಫಲಿಮಾರು, ಮಧ್ವರಾಜ್ ಬಂಗೇರ, ರಾಜೇಶ್ ಕುಲಾಲ್, ಜಾನ್ಸನ್ ಕರ್ಕಡ, ನಸೀರ್ ಅಹ್ಮದ್, ರಾಜೇಶ್ ಮೆಂಡನ್, ಸಯ್ಯದ್ ನಿಝಮ್, ಅಶೋಕ್ ನಾಯರಿ ಮತ್ತಿತರ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ನಿರೂಪಿಸಿದರು, ಅಲ್ಪಸಂಖ್ಯಾತರ ಘಟಕಾಧ್ಯಕ್ಷ ಶರ್ಫುದ್ದೀನ್ ಶೇಖ್ ವಂದಿಸಿದರು.

Exit mobile version