Site icon ಉಡುಪಿ ನ್ಯೂಸ್ ಪ್ಲಸ್

ಕಾರ್ಕಳ: ಮನೆ ಕಳ್ಳತನ ಪ್ರಕರಣ ಆರೋಪಿಯ ಸೆರೆ

ಕಾರ್ಕಳ, ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ಎಂಬಲ್ಲಿ ನಡೆದ ರಾಘವೇಂದ್ರ ಭಟ್ ಎ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹುಬ್ಬಳ್ಳಿ ಮಾರುತಿ ನಗರದ ಚಂದ್ರಗೌಡ ಪಾಟೀಲ್(56) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕಳವು ಮಾಡಿದ್ದ 5.50ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಎಸ್ಪಿ ಅಕ್ಷಯ ಹಾಕೆ ಸೂಚನೆಯಂತೆ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿ ಗಿರೀಶ್, ಅಶೋಕ್ ಪ್ರಶಾಂತ್, , ವಿಶ್ವನಾಥ್, ಗಣೇಶ್ ಮತ್ತು ರುಕ್ಕಿಣಿ ಈ ಕಾರ್ಯಾಚರಣೆ ನಡೆಸಿದ್ದು, ಎಸ್.ಪಿ ಕಚೇರಿಯ ದಿನೇಶ್ ಮತ್ತು ಶಿವಾನಂದ್ ಪತ್ತೆ ಕಾರ್ಯಕ್ಕೆ ಸಹಕರಿಸಿದ್ದಾರೆ

Exit mobile version