Site icon ಉಡುಪಿ ನ್ಯೂಸ್ ಪ್ಲಸ್

ಕಾಪು : ತಾಲ್ಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

ಕಾಪು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ವನ್ನು ಕರ್ನಾಟಕ ರಾಜ್ಯ   ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು ಈ ಸಂದರ್ಭ ಅವರು ಮಾತನಾಡಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿದಾಗ ಈ ಕಟ್ಟಡ ಕಟ್ಟಿರುದಕ್ಕೆ ಸಾರ್ಥಕ ಆಗಲಿದೆ ಸಾರ್ವಜನಿಕರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಅಧಿಕಾರಿಗಳು ದಿನಕಟ್ಟಲೆ ಕಾಯಿಸದೆ ಆದಷ್ಟು ಬೇಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಒಂದೇ ಸೂರಿನ ಅಡಿಯಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಸಹಕಾರಿಯಾಗಲಿದೆ ಎಂದರು ಕಾಪು ಶಾಸಕ ಲಾಲಾಜಿ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು  ಕಾರ್ಯಕ್ರಮದಲ್ಲಿ ಸುಧಾಮ ಶೆಟ್ಟಿ : ಶ್ರೀ ಕೂರ್ಮಾ ರಾವ್ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಅಕ್ಷಯ್ ಎಮ್ ಹಾಕೆ, . ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಸಿ. ಕೆ. ಮಂಜುಳ ಕಾರ್ಯಪಾಲಕ ಅಭಿಯಂತರರು, ಸಮನ್ವಯ ಕಛೇರಿ, ಕರ್ನಾಟಕ ಗೃಹ ಮಂಡಳಿ, ಹಾಸನ ಶ್ರೀನಿವಾಸ ಮೂರ್ತಿ ಕುಲಕರ್ಣಿ ತಹಶೀಲ್ದಾರರು, ಕಾಪು ಮುಂತಾದವರು ಉಪಸ್ಥಿತರಿದ್ದರು

Exit mobile version