Site icon ಉಡುಪಿ ನ್ಯೂಸ್ ಪ್ಲಸ್

ನಾಡದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ

ನಾಡದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ ನಿರ್ಮಿಸಿ ಕೊಡುವಂತೆ ಮಲ್ಪೆ ನಾಡ ದೋಣಿ ಮೀನುಗಾರರ ಸಂಘದವರು ಶಾಸಕ ಶ್ರೀ ಕೆ ರಘುಪತಿ ಭಟ್ ಅವರಲ್ಲಿ ಮನವಿ ಮಾಡಿದ್ದು, ಇಂದು ದಿನಾಂಕ 12-03-2023 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಡ ದೋಣಿ ಮೀನುಗಾರರಿಗೆ ಪ್ರತ್ಯೇಕ ಜಟ್ಟಿ ನಿರ್ಮಿಸಿ ಕೊಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version