Site icon ಉಡುಪಿ ನ್ಯೂಸ್ ಪ್ಲಸ್

ಕಟಪಾಡಿ- ಫಲಾನುಭವಿಗಳ ಸಮಾವೇಶ

ಕಟಪಾಡಿ- ಫಲಾನುಭವಿಗಳ  ಸಮಾವೇಶ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಕಟಪಾಡಿ ಗ್ರೀನ್ ವ್ಯಾಲಿಯಲ್ಲಿನಡೆಯಿತು ಉಡುಪಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶವು ಇಂದು ನಡೆಯಿತು.ಸಮಾವೇಶವನ್ನು ಜಿಲ್ಲಾ ಉಸ್ತುವಾರಿ, ಮೀನುಗಾರಿಕಾ ಸಚಿವ ಎಸ್ ಅಂಗಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಒಟ್ಟು 155 ಗ್ರಾಮ ಪಂಚಾಯತ್ ನ ವಿವಿಧ ಯೋಜನೆಗಳಡಿ ಸುಮಾರು 15ಸಾವಿರ ಫಲಾನುಭವಿಗಳು ಪಾಲ್ಗೊಂಡಿದ್ದರು.ಸಮಾವೇಶದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಸಂಖ್ಯೆಯ 94ಸಿ/94ಸಿಸಿ ಹಕ್ಕು ಪತ್ರಗಳು, ವಿವಿಧ ಪಿಂಚಣಿ ಸೌಲಭ್ಯ, ಕಾರ್ಮಿಕ ಇಲಾಖೆ, ಬಿಪಿಎಲ್ ಪಡಿತರ ಚೀಟಿ, ವಸತಿ ಯೋಜನೆ ಮನೆ ಮಂಜೂರಾತಿ ಪತ್ರ ಸೇರಿದಂತೆ ವಿವಿಧ ಇಲಾಖೆಗಳಡಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕೃಷಿ ಸಮ್ಮಾನ್, ಉಜ್ವಲ, ವಿದ್ಯಾಸಿರಿ ಯೋಜನೆಗಳ ಸಹಿತ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪ್ರಿಯ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಿತು. ಕಾಪು ಶಾಸಕ ಲಾಲಾಜಿ ಆರ್, ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಸುನೀಲ್ ಕುಮಾರ್, ಶಾಸಕರಾದ  ರಘುಪತಿ ಭಟ್ ಸುಕುಮಾರ್ ಶೆಟ್ಟಿ, , ಅಪರ ಜಿಲ್ಲಾಧಿಕಾರಿ ವೀಣಾ ಎಸ್, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Exit mobile version