Site icon ಉಡುಪಿ ನ್ಯೂಸ್ ಪ್ಲಸ್

ಹಳೆ ತಾಲೂಕು ಕಚೇರಿ ಎದುರುಗಡೆ ರಿಕ್ಷಾ ತಂಗುದಾಣ ಮೇಲ್ಚಾವಣಿ ಶಾಸಕ ರಘುಪತಿ ಭಟ್ ಉದ್ಘಾಟನೆ

ಉಡುಪಿ ನಗರದ ಹಳೆ ತಾಲೂಕು ಕಚೇರಿ ಎದುರುಗಡೆಯ ರಿಕ್ಷಾ ತಂಗುದಾಣ ಮೇಲ್ಚಾವಣಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರ ಮನವಿಯಂತೆ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಕೊಡುಗೆಯಾಗಿ ನಿರ್ಮಿಸಿದ್ದು, ಇಂದು ದಿನಾಂಕ 09-03-2023 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ರಿಕ್ಷಾ ತಂಗುದಾಣದ ಮೇಲ್ಚಾವಣಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಶ ಕೊಡವೂರು, ಸ್ಥಳೀಯ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್, ರಿಕ್ಷಾ ನಿಲ್ದಾಣದ ಅಧ್ಯಕ್ಷರಾದ ರಘುನಂದನ್, ಕಲ್ಕೂರ ಪ್ರತಿಷ್ಠಾನದ ವಿಜಯ್ ಕುಮಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version