Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಮಾ. 4ರಂದು ಜಾಮಿಯಾ ಮಸೀದಿಯಲ್ಲಿ ಸರ್ವಧರ್ಮಿಯರಿಗಾಗಿ ಮಸೀದಿ ಸಂದರ್ಶನ ಕಾರ್ಯಕ್ರಮ

 ಮಾ. 4ರಂದು ಜಾಮಿಯಾ ಮಸೀದಿಯಲ್ಲಿ ಸರ್ವಧರ್ಮಿಯರಿಗಾಗಿ ಮಸೀದಿ ಸಂದರ್ಶನ ಕಾರ್ಯಕ್ರಮ  ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ಹಮ್ಮಿಕೊಳ್ಳಲಾಗಿದೆ. ಜಮಾತೆ ಇಸ್ಲಾಮಿ ಹಿಂದ್ ಉಡುಪಿ ಮತ್ತು ಸ್ವಾಗತ ಸಮಿತಿ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಸೀದಿಯಲ್ಲಿ ನಡೆಯುವ ಚಟುವಟಿಕೆಗಳು ಮತ್ತು ನಾಡಿನ ಮುಸ್ಲಿಮ್ ಸಂಸ್ಕೃತಿಯ ಪ್ರದರ್ಶನ ನಡೆಯಲಿದೆ. ಇದೊಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ಸರ್ವಧರ್ಮಿಯರು ಕುಟುಂಬ ಸಮೇತ ವೀಕ್ಷಿಸಬೇಕೆಂದು ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ತಿಳಿಸಿದ್ದಾರೆ.

Exit mobile version