Site icon ಉಡುಪಿ ನ್ಯೂಸ್ ಪ್ಲಸ್

ಸ್ಕೂಟರ್‌ ರಿಕ್ಷಾ ನಡುವೆ ಡಿಕ್ಕಿ-ಸವಾರನಿಗೆ ಗಾಯ

ಕಾರ್ಕಳ: ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಾಣೂರು ಮಠದ ಬೈಲ್ ಎಂಬಲ್ಲಿ ಸ್ಕೂಟರ್‌ಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಮಂಗಳೂರು ಗುರುಪುರದ ರಘುರಾಮ್ ಪೈ ಗಾಯಗೊಂಡ ಸ್ಕೂಟರ್ ಸವಾರ.ಮಂಗಳೂರು ಗುರುಪುರದ ರಘುರಾಮ್ ಪೈ ಎಂಬವರು ತನ್ನ ಸ್ಕೂಟರ್ ನಲ್ಲಿ ಮಂಗಳೂರಿನ ಗುರುಪುರದಿಂದ ಕಾರ್ಕಳದ ಕಡೆಗೆ ಬರುತ್ತಿದ್ದಾಗ, ಕಾರ್ಕಳದಿಂದ ಬೆಳುವಾಯಿ ಕಡೆಗೆ ಹೋಗುತ್ತಿದ್ದ ರಿಕ್ಷಾ ಸ್ಕೂಟರಿಗೆ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಸ್ಕೂಟರ್ ಸವಾರ ರಘುರಾಮ್ ಗಾಯಗೊಂಡಿದ್ದು, ಸಮಾಜ ಸೇವಕ ಕಾರ್ಕಳ ಬೈಪಾಪ್ ನ ರಾಜೇಶ್ ಎಂಬವರು ಗಾಯಾಳುವನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version