Site icon ಉಡುಪಿ ನ್ಯೂಸ್ ಪ್ಲಸ್

ಮಣಿಪಾಲ: ವಸತಿಗೃಹದಲ್ಲಿ ನೇಣು ಬಿಗಿದು ಪ್ರೊಫೆಸರ್ ಆತ್ಮಹತ್ಯೆಗೆ ಶರಣು

ಮಣಿಪಾಲ: ನೇಣು ಬಿಗಿದು ಪ್ರೊಫೆಸರ್‌ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉತ್ತರಪ್ರದೇಶದ ಅಹ್ಮದ್ ಮಿರ್ಜಾ (38) ನೇಣಿಗೆ ಶರಣಾದವರು. ಮೃತಪಟ್ಟು ನಾಲ್ಕು ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಇವರು ಮಣಿಪಾಲದ ಆರ್ಕಿಟೆಕ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು.ಮಾನಸಿಕ ಖಿನ್ನತೆ ಯಿಂದ ಬಳಲುತಿದ್ದರು ಎಂದು ಹೇಳಲಾಗುತ್ತದೆ. ಎಸ್‌ಐ ನವೀನ್  ಹೆಡ್‌ಕಾನ್‌ಸ್ಟೆಬಲ್ ಸುಕುಮಾರ್, ಘಟನ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

Exit mobile version