Site icon ಉಡುಪಿ ನ್ಯೂಸ್ ಪ್ಲಸ್

ಎಂ ಎಲ್ ಸಿ ಅನುದಾನದಲ್ಲಿ ಹೊಸ್ಮಾರು ಡಾಬಾ ಬಳಿ ಕಾಂಕ್ರಿಟ್ ರಸ್ತೆಗೆ ಗುದ್ದಲಿ ಪೂಜೆ

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಬಿಡುಗಡೆಗೊಳಿಸಿದ ಅನುದಾನದಲ್ಲಿ ಕಾರ್ಕಳ ತಾಲೂಕಿನ ಇದು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ್ಮಾರು ಡಾಬಾ ಬಳಿ ಕಾಂಕ್ರಿಟ್ ರಸ್ತೆಗೆ ಗುದ್ದಲಿ ಪೂಜೆಯನ್ನು ಗ್ರಾಮ ಪಂಚಾಯತ್ತಿನ ಉಪಾಧ್ಯಕ್ಷ ವಿಜಯ್‌ ಕುಮಾರ್ ಜೈನ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಪ್ರೇಮ್ ಕುಮಾರ್ ಜೈನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಸುದೇಶ್ ರಾವ್ ಹಾಗೂ ಸದಸ್ಯರಾದ ಸುರೇಶ್, ರಮೇಶ್ ಜೆ.ಕೆ, ಜಯ ಸುವರ್ಣ, ರಮಣಿ, ನಯನ, ಪಿಡಬ್ಲೂಡಿ ಕಂಟ್ರಾಕ್ಟರ್ ರೋಜ್ ಜೋಸೆಫ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ  ಮಲಿಕಾ  ಮುಂತಾದವರು ಉಪಸ್ಥಿತರಿದ್ದರು

 

Exit mobile version