Site icon ಉಡುಪಿ ನ್ಯೂಸ್ ಪ್ಲಸ್

ಚಾಲಕನ ನಿಯಂತ್ರಣ ತಪ್ಪಿ ಡಾಬಾಕ್ಕೆ ನುಗ್ಗಿದ ಟಿಪ್ಪರ್ ಗ್ರಾಹಕ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ಡಾಬಾಕ್ಕೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರಿಗೆ ಗಂಭೀರವಾಗಿ ಗಾಯವಾದ ಘಟನೆ ಮಾವಿನಕಟ್ಟೆ ಕ್ರಾಸ್ ಬಳಿ ಸೋಮವಾರ ನಡೆದಿದೆ. ಮಹಮ್ಮದ್ ಹನೀಫ್ ಮಾಲಕತ್ವದ ಮಾವಿನಕಟ್ಟೆಯ ಸರ್ಕಲ್ ಬಳಿಯಿದ್ದ ಸ್ವೀಕಾರ್ ಫ್ಯಾಮಿಲಿ ಡಾಬಾದೊಳಗೆ ಕುಂದಾಪುರದಿಂದ ಗುಲ್ವಾಡಿಯತ್ತ  ಸಾಗಿಸುತ್ತಿದ್ದ ಟಿಪ್ಪರ್ ಏಕಾಏಕಿ ನುಗ್ಗಿದೆ. ಈ ವೇಳೆ ಡಾಬಾದಲ್ಲಿದ್ದ ಹನೀಫ್ ಹಾಗೂ ಅವರ ಮಗ ನಿಜಾಮುದ್ದೀನ್ ಪಾರಾಗಿದ್ದು, ಗ್ರಾಹಕ ಅಬಿದ್ದಿನ್ ಅವರಿಗೆ ಗಂಭೀರ ಗಾಯಗಳಾಗಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಿಂದ ಹೊಟೇಲ್ ಒಳಗಿದ್ದ ಸಾಮಗ್ರಿಗಳು ಜಖಂ ಗೊಂಡಿದ್ದು 3 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Exit mobile version