Site icon ಉಡುಪಿ ನ್ಯೂಸ್ ಪ್ಲಸ್

ಕಾಪು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಮಲ್ಲಾರು ಗ್ರಾಮದ ಕೊಂಬಗುಡ್ಡೆ ನಿವಾಸಿ ಚಂದ್ರ (48) ಅವರ ಮೃತದೇಹ ಶನಿವಾರ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.  ಕೃಷಿ ಕೂಲಿ ಕೆಲಸಕ್ಕೆ ತೆರಳಿದ್ದ ಚಂದ್ರ ಅವರು ಸಂಜೆ ಮನೆಗೆ ಬಂದು ಸ್ನಾನ ಮಾಡಿ, ಬಳಿಕ ಕಾಪು ಪೇಟೆಗೆ ತೆರಳಿದ್ದು ಮನೆಗೆ ಮರಳದೇ ಅಲ್ಲಿಂದಲೇ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದು, ಕೇವಲ ತಲೆ ಬುರುಡೆಯೊಂದಿಗೆ ಪತ್ತೆಯಾಗಿದೆ. ಮೃತನ ಮೈಮೇಲೆ ಇದ್ದ ಬಟ್ಟೆಯನ್ನು ನೋಡಿ, ಮೃತದೇಹದ ಗುರುತು ಪತ್ತೆ ನಡೆಸಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆಪದ್ಭಾಂಧವ ಸೂರಿ ಶೆಟ್ಟಿ ಮತ್ತು ನಾಗರಾಜ್ ಸಹಕಾರದೊಂದಿಗೆ ದೇಹವನ್ನು ಮೇಲಕ್ಕೆತ್ತಿ ಶವಾಗಾರಕ್ಕೆ ಸಾಗಿಸಲಾಗಿದೆ.

Exit mobile version