Site icon ಉಡುಪಿ ನ್ಯೂಸ್ ಪ್ಲಸ್

ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಖಂಡನೀಯ ದೂರು ದಾಖಲಿಸಿ ಬಂದಿಸುವಂತೆ ಆಗ್ರಹಿಸುತ್ತೇನೆ ‌- ಕಾಂಗ್ರೇಸ್ ‌ವಕ್ತಾರ ಶುಭದರಾವ್.

ಮಾಜಿ ಮುಖ್ಯಮಂತ್ರಿ ‌ಸಿದ್ದರಾಮಯ್ಯರವ ವಿರುದ್ಧ ಸಚಿವ ಅಶ್ವಥ್ ನಾರಾಯಣ ಆಡಿರುವ ಮಾತು ಅತ್ಯಂತ ಖಂಡನೀಯ ಕೊಲೆಗೆ ಪ್ರಚೋದನೆ ನೀಡುವ ಮಾತನಾಡಿರುವ ಸಚಿವರ ಮೇಲೆ ಪ್ರಕರಣ ದಾಖಲಿಸಿ ತಕ್ಷಣ ಬಂದಿಸಬೇಕು ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಸರಕಾರವನ್ನು ಆಗ್ರಹಿಸಿದ್ದಾರೆ. ಶೋಶಿತ ದಲಿತ, ಹಿಂದುಳಿದ, ಮತ್ತು ಅಲ್ಪಸಂಖ್ಯಾತ ‌ವರ್ಗದ ಜನರ ದ್ವನಿಯಾಗಿ ನಿರಂತರ ಹೋರಾಡುತ್ತಾರೆ ಎನ್ನುವ ಒಂದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ ಹಾಗಾಗಿ ನಾವೆಲ್ಲರೂ ಸಿದ್ದರಾಮಯ್ಯ ಪರವಾಗಿ ಧ್ವನಿ ಎತ್ತುವ ಅಗತ್ಯ ಇದೆ ಎಂದರು. ತನ್ನ ಮುಖ್ಯಮಂತ್ರಿಯ ಅಧಿಕಾರದ ಅವದಿಯಲ್ಲಿ ಯಾವುದೇ ಆರೋಪಕ್ಕೆ ಗುರಿಯಾಗದೆ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ದಾಖಲೆ ಮಟ್ಟದ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ತಂದ ಕೀರ್ತಿ ಅವರದ್ದು, ಅಂತಹ ನಾಯಕನ ವಿರುದ್ಧ ನೀಡಿರುವ ಹೇಳಿಕೆಯನ್ನು ಮನುಷ್ಯತ್ವ ಇರುವ ಎಲ್ಲರೂ ವಿರೋದಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

Exit mobile version