Site icon ಉಡುಪಿ ನ್ಯೂಸ್ ಪ್ಲಸ್

ಬಂಟಕಲ್- ಮನೆಗೆ ಅಕಸ್ಮಿಕ ಬೆಂಕಿ ತಗುಲಿ ಭಾಗಶ ಹಾನಿ

ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ಕೋಡುಗುಡ್ಡೆ ಎಂಬಲ್ಲಿ ಲೀನಾ ಕುಟ್ಟಿನೋ ಎಂಬವರ ವಾಸದ ಮನೆಗೆ ಅಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಾಗಶ ಸುಟ್ಟು ಹೋಗಿರುವ ಘಟನೆ ಸಂಭವಿಸಿದೆ. ಬಚ್ಚಲು ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ಆಕಸ್ಮಿಕವಾಗಿ ಮನೆಯ ಒಂದು ಪಾರ್ಶ್ವದ ಹಂಚು ಚಾವಣಿಗೆ ತಗಲಿದ ಪರಿಣಾಮ, ಮನೆಯ ಒಂದು ಪಾರ್ಶ್ವದಲ್ಲಿದ್ದ ಹಂಚು ಚಾವಣಿ ಹಾಗೂ ಮೇಲಿನ ಮರದ ಮುಚ್ಚಿಗೆ ಸಂಪೂರ್ಣ ಸುಟ್ಟು ಹೋಗಿದೆ. ಮನೆಯ ಎಲ್ಲಾ ಪರಿಕರಗಳಿಗೂ ಹಾನಿಯುಂಟಾಗಿದೆ.ಮನೆಯವರು ಪಕ್ಕದ ಮನೆಯಲ್ಲಿ ಸ್ವ ಸಹಾಯ ಗುಂಪಿನ ಸಭೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಪಕ್ಕದ ಮನೆಯವರು ಸೇರಿಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ..ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಆರ್ ಪಾಟ್ಕರ್, ಗ್ರಾ.ಪಂ.ಸದಸ್ಯರಾದ ವೈಲೆಟ್ ಕ್ಯಾಸ್ತಲಿನೋ, ಜೆಸಿಂತಾ ಡಿಸೋಜಾ ಹಾಗೂ ಸ್ಥಳೀಯರಾದ ಮಂಜುನಾಥ ಸುರೇಂದ್ರ ಪ್ರಭು, ಸೆಲಿಸ್ ಡಯಾಸ್ ಮೊದಲಾದವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.ಶಿರ್ವ ಠಾಣಾಧಿಕಾರಿ ರಾಘವೇಂದ್ರ ರವರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

Exit mobile version