Site icon ಉಡುಪಿ ನ್ಯೂಸ್ ಪ್ಲಸ್

ಕಾಪು : ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕರಾವಳಿ ಧ್ವನಿ ಯಾತ್ರೆ

ಬಿಜೆಪಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲದಾಗಿದೆ.ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ವತಿಯಿಂದ ಎಲ್ಲಾ ನಾಯಕರು ಒಟ್ಟುಗೂಡಿ ಪ್ರತಿ ಜಿಲ್ಲೆಯಲ್ಲಿಯೂ ಪ್ರಜಾ ಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಇದರ ಮುಂದಿನ ಹಂತದ ಕಾರ್ಯಕ್ರಮ  ವಾಹನ ಜಾತದ ಮೂಲಕ ಪ್ರತಿ ಜಿಲ್ಲಾ ಪಂಚಾಯತ್ ನಲ್ಲಿ ಸಾರ್ವಜನಿಕ ಸಭೆ  ಕರಾವಳಿ ಕರ್ನಾಟಕದ ಜನರ ಅಶೋತ್ತರಗಳ ಈಡೇರಿಕೆಗಾಗಿ ವಿಶೇಷವಾಗಿ ರೂಪಿಸಿರುವ ದಶ ಸಂಕಲ್ಪ ಪ್ರಣಾಳಿಕೆ ಯ ಘೋಷಣೆಗಳನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ” ಕರಾವಳಿ ಪ್ರಜಾಧ್ವನಿ ಯಾತ್ರೆ” ಯು, ದಿನಾಂಕ 07/02/2023, ಮಂಗಳವಾರ ದಂದು,  ಹೆಜಮಾಡಿಯಿಂದ ಬೆಳಿಗ್ಗೆ 9.00 ಗಂಟೆಗೆ ಆರಂಭಗೊಳ್ಳಲಿದೆ. :- ಹೆಜಮಾಡಿ ಪೇಟೆ -> ಮಹಾ ಗಣಪತಿ ದೇವಸ್ಥಾನ-> 9.30ಕ್ಕೆ ಪಡುಬಿದ್ರಿ ಪೇಟೆಯಲ್ಲಿ ಸಾರ್ವಜನಿಕ ಸಭೆ, ನಂತರ.ಪಡುಬಿದ್ರಿ -> ನಂದಿಕೂರು -> ಮುದರಂಗಡಿ ಜಂಕ್ಷನ್-> ಎಲ್ಲೂರು -> ಬೆಳಪು -> ಪಕೀರ್ಣಕಟ್ಟೆ -> ಮಜೂರು -> ಕುತ್ಯಾರು -> ಶಿರ್ವಾ. 11.30ಕ್ಕೆ ಶಿರ್ವಾ ಪೇಟೆಯಲ್ಲಿ ಸಾರ್ವಜನಿಕ ಸಭೆ ನಂತರ.ಶಿರ್ವಾ -> ಪಾಂಬೂರ್ -> ಬಂಟಕಲ್ಲು -> ಶಂಕರ್ ಪುರ -> ಸುಭಾಸ್ ನಗರ -> ಕಟಪಾಡಿ 12.30ಕ್ಕೆ, ಕಟಪಾಡಿ ಪೇಟೆಯಲ್ಲಿ ಸಾರ್ವಜನಿಕ ಸಭೆ *. ಜನ ಸಾಮಾನ್ಯರ ಪರವಾಗಿ ಧ್ವನಿ ಮೊಳಗಿಸುವ ಕಾಂಗ್ರೆಸ್ ಪಕ್ಷದ “ಕರಾವಳಿ ಪ್ರಜಾಧ್ವನಿ ಯಾತ್ರೆ”  ಕ್ಷೇತ್ರದ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಸಾಗಿ , ಪ್ರಮುಖ ಸ್ಥಳಗಳಲ್ಲಿ ಸಭೆಗಳನ್ನು ನಡೆಸಿ, ಪಕ್ಷದ ರಾಷ್ಟ್ರ ಮಟ್ಟದ , ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಪ್ರಮುಖ ನಾಯಕರುಗಳು ಭಾಗವಹಿಸುವ ಈ ಐತಿಹಾಸಿಕ ಯಾತ್ರೆಯಲ್ಲಿ ಪಕ್ಷದ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ಬ್ಲಾಕ್ ಮಟ್ಟದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಮುಂಚೂಣಿ ಹಾಗೂ ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು/ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಹಾಗೂ ಬೂತ್ ಸಮಿತಿಗಳ ಅಧ್ಯಕ್ಷರು/ ಪದಾಧಿಕಾರಿಗಳು, ಮತ್ತು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ  ಎಂದು ತಿಳಿಸಿದರು ಈ ಸಂದರ್ಭದಲ್ಲಿ ನವೀನ್ ಚಂದ್ರ ಸುವರ್ಣ ಅಧ್ಯಕ್ಷರು- ಕಾಪು ಬ್ಲಾಕ್ ಕಾಂ. ಸ (ದ.) ಜಿತೇಂದ್ರ ಫುರ್ಟಾಡೋ ಅಧ್ಯಕ್ಷರು- ಕಾಪು ಬ್ಲಾಕ್ ಕಾಂ. ಚುನಾವಣಾ ಪ್ರಚಾರ ಸಮಿತಿ.  ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸರ್ಪುದ್ದೀನ್ ಶೇಕ್ ಕಾಪು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುನಿಲ್ ಬಂಗೇರ   ಉಪಸ್ಥಿತರಿದ್ದರು 

Exit mobile version