Site icon ಉಡುಪಿ ನ್ಯೂಸ್ ಪ್ಲಸ್

ನಾಡೋಜ ಡಾ. ಜಿ. ಶಂಕರ್ ಅವರಿಗೆ “ಕರುನಾಡ ಕರುಣಾಳು” ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ

ರಂಗಭೂಮಿ (ರಿ.) ಉಡುಪಿ ಇದರ ರಂಗಭೂಮಿ ರಂಗೋತ್ಸವ ಅಂಗವಾಗಿ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳ ಸಾಮುದಾಯಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿರುವ ನಾಡೋಜ ಡಾ. ಜಿ. ಶಂಕರ್ ಅವರಿಗೆ “ಕರುನಾಡ ಕರುಣಾಳು” ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದಿನಾಂಕ 04-02-2023 ರಂದು ನಡೆಯಿತು. ಈ ಸಮಾರಂಭದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿದರು. ಈ ಸಂದರ್ಭ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತಂಡದೊಂದಿಗೆ ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡಿ ಮೆಚ್ಚುಗೆಗಳಿಸಿದ ವಸುಪ್ರದಾ ಇವರನ್ನು ಉಡುಪಿ ಸಮಸ್ತ ನಾಗರಿಕ ಪರವಾಗಿ ಅಭಿನಂದಿಸಲಾಯಿತು.

Exit mobile version