Site icon ಉಡುಪಿ ನ್ಯೂಸ್ ಪ್ಲಸ್

ರಾಷ್ಟ್ರಮಟ್ಟದ ಮಹಿಳಾ ವಾಲಿಬಾಲ್ ನಲ್ಲಿ ಮಿಂಚುತ್ತಿರುವ ಕಾರ್ಕಳದ ಸಹೋದರಿಯರು

ಕಾರ್ಕಳ: ತೆಳ್ಳಾರು ರಸ್ತೆ ಸಾಂತ್ರಬೆಟ್ಟುವಿನ ರಾಜೇಂದ್ರ ಪ್ರಸಾದ್(ಪೀಚು) ಹಾಗೂ ಪ್ರಿಯಾ ದಂಪತಿಗಳ ಪುತ್ರಿ ಕುಮಾರಿ ಶ್ರಿಯಾ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿದ್ದು ಕರ್ನಾಟಕ ರಾಜ್ಯ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿದಿಸುತ್ತಿದ್ದು ಪ್ರಸ್ತುತ ಪೆಬ್ರವರಿ 2 ರಿಂದ 9 ವರೆಗೆ ಅಸ್ಸಾಂ ನಲ್ಲಿ ನಡೆಯುವ ರಾಷ್ಟ್ರೀಯ 71 ಮಹಿಳಾ ವಾಲಿಬಾಲ್ ಕ್ರೀಡಾಕೂಟದ ಭಾಗವಹಿಸುತ್ತಿದ್ದಾರೆ. ಸಹೋದರಿ ಕುಮಾರಿ ದ್ರುವಿ ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಕರ್ನಾಟಕ ರಾಜ್ಯ ಸಬ್ ಜ್ಯೂನಿಯರ್ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿದಿಸಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ. ಈ ಸಹೋದರಿಯರಿಗೆ ವಿವಿದ ಸಂದರ್ಭಗಳಲ್ಲಿ ರಮೇಶ್‌ SDM,  ದಿ. ನಾಗೇಶ್,  ಬ್ರಿಜೇಶ್ ಅರಿಗ ಹಾಗೂ ಸಂತೋಷ್ ಡಿಸೋಜ ಮೊದಲಾದವರು ತರಬೇತಿಯನ್ನು ನೀಡಿರುತ್ತಾರೆ.

Exit mobile version