Site icon ಉಡುಪಿ ನ್ಯೂಸ್ ಪ್ಲಸ್

ಬಂಟ್ವಾಳ: ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ

ಬಂಟ್ವಾಳ: ಬಂಟ್ವಾಳ ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಪ್ರೀತಂ ಎಂಬವರಿಗೆ ಸೇರಿದ ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಮೇಲಿನ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ‌.ಎಲೆಕ್ಟ್ರಾನಿಕ್ಸ್ ಜೊತೆಗೆ ಕೊಮಾಕಿ ಕಂಪೆನಿಗೆ ಸೇರಿದ ದ್ವಿಚಕ್ರವಾಹನಗಳ ದಾಸ್ತಾನು ಇರಿಸಲಾಗಿರುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೊಮಾಕಿ ಕಂಪೆನಿಯ ಬ್ಯಾಟರಿ ಚಾಲಿತ ಸ್ಕೂಟರ್ ಗಳು ಇಲ್ಲಿದ್ದು, ಇದರ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹಚ್ಚಿಕೊಂಡಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ. ಸಾರ್ವಜನಿಕರು ಬೆಂಕಿಯನ್ನು ನೋಡಿ ಅಗ್ನಿಶಾಮಕ ದಳದ ವರಿಗೆ ಸಂಪರ್ಕ ಮಾಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ.

Exit mobile version