Site icon ಉಡುಪಿ ನ್ಯೂಸ್ ಪ್ಲಸ್

ಮಜೂರು ಗ್ರಾ. ಪಂ 80 ಲಕ್ಷ ಅನುದಾನ : ಶಾಸಕ ಲಾಲಾಜಿ ಮೆಂಡನ್

ಮಂಜೂರು ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ತಡೆಗೋಡೆ, ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಸುಮಾರು 10 ಕೋಟಿ ರೂಗಳ ಅನುದಾನ ಒದಗಿಸಲಾಗಿದ್ದು.. ಈ ಭಾಗದ ಗ್ರಾಮೀಣ ರಸ್ತೆಗಳನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು.. ಸ್ಥಳೀಯ ಗ್ರಾಮ ಸದಸ್ಯರ ಹಾಗೂ ಕಾರ್ಯಕರ್ತರು, ಸಾರ್ವಜನಿಕರ ಬೇಡಿಕೆ ಮೇರೆಗೆ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೀಗ ಈ ಭಾಗದ ಜನರ ಅಪೇಕ್ಷೆ ಮೇರೆಗೆ ಪಾದೂರು ಕಲ್ಲುಗುಡ್ಡೆ ಗರಡಿ ಬಳಿ ನದಿ ಸಂರಕ್ಷಣೆ ಕಾಮಗಾರಿಗೆ ಸುಮಾರು 40 ಲಕ್ಷ ಒದಗಿಸಲಾಗಿದ್ದು ಹಾಗೂ ಜಾಲಂಚರು ಸೇತುವೆ ಬಳಿ ನದಿದಂಡೆ ಸಂರಕ್ಷಣೆಗೆ 40 ಒದಗಿಸಿ ಗುದ್ದಲಿ ಪೂಜೆ ನೆರವೇರಿಸಿದ್ದು.. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾನ್ಯ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಹೇಳಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶರ್ಮಿಳಾ ಆಚಾರ್ಯ, ಉಪಾಧ್ಯಕ್ಷರು ಮದುಸೂದನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಿಲ್ಪಾ ಜಿ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವನಿತಾ, ಮಂಜುಳಾ, ಸಹನಾ ತಂತ್ರಿ ಹಾಗೂ ಪಕ್ಷದ ಪ್ರಮುಖರಾದ ಗಣೇಶ್ ಶೆಟ್ಟಿ ಹೇರೂರು, ಲೀಲಾದರ್ ಶೆಟ್ಟಿ, ನಿತ್ಯಾನಂದ ಆಚಾರ್ಯ, ಮೇಘನಾಥ ಆಚಾರ್ಯ, ದಿನೇಶ್ ದೇವಾಡಿಗ, ರವಿರಾಜ್ ಶೆಟ್ಟಿ, ಜಿತೇಶ್ ಕುಮಾರ್, ಸುಬ್ರಮಣ್ಯ ಇತಾಳ್, ಹರಿಕೃಷ್ಣ ಇತಳ್, ಪ್ರಕಾಶ್ ಆಚಾರ್ಯ ಹಾಗೂ ಸ್ಥಳೀಯ ಕಾರ್ಯಕರ್ತರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

Exit mobile version