Site icon ಉಡುಪಿ ನ್ಯೂಸ್ ಪ್ಲಸ್

ಕಾರ್ಕಳ ರಥಬೀದಿ ಒಳಚರಂಡಿ ಕಾಮಗಾರಿಗೆ ಕಳಪೆ ಎಂದು ಮತ್ತೊಮ್ಮ ಸಾಬೀತು

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ 13 ಕೋಟಿ ರೂ ವೆಚ್ಚದ ಒಳಚರಂಡಿಯ ಕಾಮಗಾರಿಯು ಕಳಪೆಯಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ಈ ಬಗ್ಗೆ ಅನೇಕ ದೂರುಗಳಿದ್ದರೂ ಸಚಿವ ಸುನೀಲ್ ಕುಮಾರ್ ರವರ ಮೌನ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಇದರಿಂದಾಗಿ ಕಳಪೆಯ ಜೊತೆ ಭೃಷ್ಟಾಚಾರವೂ ನಡೆದಿದೆ ಎನ್ನುವ ಸಂಶಯ ಮೂಡುತ್ತದೆ ಎಂದು ಪುರಸಭಾ ‌ಸದಸ್ಯ, ಹಾಗೂ ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಒಳ ಚರಂಡಿಯ ಕಳಪೆ ಕಾಮಗಾರಿಯನ್ನು ಮುಚ್ಚಿಹಾಕಲು ಒಳಚರಂಡಿ ಪೈಪಿಗೆ ಹೆಚ್ಚುವರಿ ಪೈಪನ್ನು ಅಳವಡಿಸಿ ಕಲುಶಿತ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಟ್ಟ ಪರಿಣಾಮ ಕಲುಶಿತ ನೀರು‌ ರಥಬೀದಿಯ ಅನೇಕ ಬಾವಿಗಳಿಗೆ ಹರಡಿದೆ ಇದರಿಂದಾಗಿ ಬಾವಿಯ ನೀರು ಉಪಯೋಗಕ್ಕೆ ಯೋಗ್ಯವಲ್ಲದೆ ಸಾಂಕ್ರಾಮಿಕ ರೋಗ ಹರಡುವ ಬೀತಿ ಸಾರ್ವಜನಿಕರಿಗೆ ಉಂಟಾಗಿದೆ ಇಂತಹ ಕಾಮಗಾರಿ ನಡೆಸಿ ಜನತೆಗೆ ದ್ರೋಹ ಎಸಗಿರುವ ಗುತ್ತಿಗೆದಾರ ಮತ್ತು ಸಂಬಂಧಿಸಿದ ಅದಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು. ಇಷ್ಟು ದೊಡ್ಡ ಮೊತ್ತದ ಕಾಮಗಾರಿಯಾದರೂ ಗುತ್ತಿಗೆದಾರ ಒಮ್ಮೆಯೂ ಸ್ಥಳಕ್ಕೆ ಬೇಟಿ ನೀಡಲಿಲ್ಲ ಆದ್ದರಿಂದ ‌ಕಾಮಗಾರಿ ವಹಿಸಿಕೊಂಡ ಸಂಸ್ಥೆ ಅಸಲಿಯೋ ನಕಲಿಯೋ ಎಂಬ ಸಂಶಯ ಮೂಡುತಿದೆ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ಈ ಹಿಂದೆಯೂ ‌ಇದೇ ರೀತಿ ಸಮಸ್ಯೆಯಾದಾಗ ಜಿಲ್ಲಾದಿಕಾರಿಯವರಿಗೆ, ತಾಹಶೀಲ್ದಾರರಿಗೆ, ಪರಿಸರ ಮಾಲಿನ್ಯ ಮಂಡಲಿಗೆ ಮತ್ತು ನಗರ ರಾಣೆಗೆ ದೂರು ಸಲ್ಲಿಸಿದ್ದೆ ಅವರೆಲ್ಲರೂ ಯಾವುದೋ ಒತ್ತಡಕ್ಕೆ ಮಣಿದಂತೆ ಹಿಂಬರಹ ನೀಡಿ ನಿರ್ಲಕ್ಷ್ಯಿಸಿದ್ದರ ಫಲ ಇಂದು ಈ ಮಟ್ಟದ ಮೋಸ ನಡೆಯಲು ಸಾದ್ಯವಾಯಿತು ಪವಿತ್ರ ರಥಬೀದಿಯನ್ನು ಅಪವಿತ್ರ ಮಾಡಿದ ಅಪಕೀರ್ತಿ ಇವರಿಗೆಲ್ಲರಿಗೂ ಸಲ್ಲುತ್ತದೆ ಎಂದರು. ಈ ಸಮಸ್ಯೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಶುಭದರಾವ್  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version