Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿಯಲ್ಲಿ ರಾಷ್ಟ್ರೀಯ ಮಟ್ಟದ ಡ್ರ್ಯಾಗನ್ ಬೋಟ್ ಪಂದ್ಯಾವಳಿ – ಪೂರ್ವ ತಯಾರಿಯ ಬಗ್ಗೆ ಶಾಸಕ ರಘುಪತಿ ಭಟ್ ಸ್ಥಳ ಪರಿಶೀಲನೆ

ರಾಷ್ಟ್ರೀಯ ಮಟ್ಟದ ಡ್ರ್ಯಾಗನ್ ಬೋಟ್ ಪಂದ್ಯಾವಳಿ ಫೆಬ್ರವರಿ 23 ರಿಂದ 26ರ ವರೆಗೆ ಉಪ್ಪೂರಿನ ಮಡಿಸಾಲು ನದಿಯಲ್ಲಿ ನಡೆಯಲಿದ್ದು, ಇಂದು ದಿನಾಂಕ 30-01-2023 ರಂದು ಶಾಸಕರಾದ ಕೆ. ರಘುಪತಿ ಭಟ್ ರವರು ಸ್ಥಳಕ್ಕೆ ಭೇಟಿ ಪೂರ್ವ ತಯಾರಿಯ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು. ರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ಭಾಗಗಳಿಂದ 700 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದು ವಿಜೇತರಾದವರು ಏಷ್ಯನ್ ಗೇಮ್ಸ್ ನಲ್ಲಿ ಭಾರತದಿಂದ ಪ್ರತಿನಿಧಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಯಾಕಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಜನರಲ್ ಎಂ.ಎನ್ ದೇವಯ್ಯ, ಕಾರ್ಯದರ್ಶಿಗಳಾದ ದಿಲೀಪ್ ಕುಮಾರ್, ಉಡುಪಿ ಜಿಲ್ಲಾ ಕಯಾಕಿಂಗ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ದಿನೇಶ್ ಸೆಂಟರ್ ಫಾರ್ ಸ್ಪೋರ್ಟ್ಸ್ ಅಂಡ್ ಸೈನ್ಸ್ ನ ಆಂಟೋನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ಹಾರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Exit mobile version