Site icon ಉಡುಪಿ ನ್ಯೂಸ್ ಪ್ಲಸ್

ಪರಶುರಾಮ್ ಥೀಮ್ ಪಾರ್ಕ್ ವೀಕ್ಷಣೆಗೆ ಉಡುಪಿಯಿಂದ ಉಚಿತ ಬಸ್ ವ್ಯವಸ್ಥೆ – ಶಾಸಕ ರಘುಪತಿ ಭಟ್ ಚಾಲನೆ

ಉಡುಪಿ ಕಾರ್ಕಳದ ಬೈಲೂರಿನ ಉಮಿಕಲ್ ಕುಂಜ ಬೆಟ್ಟದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್ ವೀಕ್ಷಣೆ ಮತ್ತು ರಾತ್ರಿ ಬೆಳಕು ಪ್ರದರ್ಶನ ವೀಕ್ಷಿಸಲು ಉಡುಪಿಯ ಕಲ್ಸಂಕ (ಮಾಂಡವಿ ಸ್ಕ್ವೇರ್) ದಿಂದ ಬೈಲೂರಿಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಮಾಡಿದ್ದು, ಇಂದು ದಿನಾಂಕ 28-01-2023 ರಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾದ ರಾಘವೇಂದ್ರ ಕಿಣಿ, ನಗರ ಸಭಾ ಸದಸ್ಯರಾದ ಸುಂದರ್ ಕಲ್ಮಾಡಿ, ಕಲ್ಪನಾ ಸುಧಾಮ, ನಾಮ ನಿರ್ದೇಶಿತ ಸದಸ್ಯರಾದ ಸುಬೇದಾ ಉಪಸ್ಥಿತರಿದ್ದರು.

Exit mobile version