Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ ಜಂಕ್ಷನ್ ನಲ್ಲಿ ಸರಣಿ ಅಪಘಾತ.

ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಶನಿವಾರ ಮಧ್ಯಾಹ್ನ ಸರಣಿ ಅಪಘಾತ ನಡೆದು ಕೆಲಕಾಲ ಸಂಚಾರ ಅಸ್ತವ್ಯಸ್ತ ಗೊಂಡ ಘಟನೆ ಸಂಭವಿಸಿದೆ. ಮಂಗಳೂರು ಕಡೆ ಯಿಂದ ಉಡುಪಿ ಕಡೆಗೆ ಹೋಗುವ ಮಹಾರಾಷ್ಟ್ರ ನೋಂದಣಿ ಕಾರು ಹಠಾತ್ತನೆ ಹೆದ್ದಾರಿಯಲ್ಲಿ ಹಿಮ್ಮುಖ ಚಲಿಸಿ ಹಿಂಬದಿಯಲ್ಲಿ ಬರುತ್ತಿದ್ದ ಆಟೋ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಪರಿಣಾಮ ಸಂಚಾರ ಕೆಲಕಾಲ ಅಸ್ತವ್ಯಸ್ತ ಗೊಂಡಿತು. ಅದೇ ಸಮಯ ಇನ್ನೊಂದು ಕಾರಿಗೆ ಅದೇ ದಿಕ್ಕಿನಲ್ಲಿ ಚಲಿಸುವ ಘನ ವಾಹನ ಡಿಕ್ಕಿ ಗೊಂಡಿದೆ. ಸ್ವಲ್ಪ ಹೊತ್ತಿನ ನಂತರ ಪೋಲಿಸ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿ ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದ ವಾಹನಗಳನ್ನು ಪೋಲೀಸ್ ಠಾಣೆಗೆ ಕೊಂಡೊಯ್ದು ತನಿಖೆ ನಡೆಸುತ್ತಿದ್ದಾರೆ

Exit mobile version